ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ: ಕೃಷಿ ಜತೆ ಕಾರ್ಯದರ್ಶಿ ಅಮಾನತು  Search similar articles
ರಸಗೊಬ್ಬರ ಪೂರೈಕೆಯಲ್ಲಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎನ್.ವಿ. ಚಂದ್ರಶೇಖರ್ ಅವರನ್ನು ಸರಕಾರ ಅಮಾನತುಗೊಳಿಸಲಾಗಿದೆ.

ಹಾವೇರಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆಸಿದ ಗೋಲಿಬಾರ್‌ನಲ್ಲಿ ಒರ್ವ ಮೃತಪಟ್ಟಿದ್ದು, ಇತರ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಯ ಬಳಿಕ ಸರಕಾರ ಈ ಆದೇಶವನ್ನು ಹೊರಡಿಸಿದೆ.

ಈ ಮಧ್ಯೆ ಘಟನೆಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರೇ ನೇರ ಹೊಣೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ, ರಾಜ್ಯಪಾಲರು ತಮ್ಮ ಆಡಳಿತದಲ್ಲಿ ತೆಗೆದುಕೊಂಡಿರುವ ನಿರ್ಧಾರವೇ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದ್ದಾರೆ.

ಅಲ್ಲದೆ, ಗಲಭೆಗೆ ಕಾಂಗ್ರೆಸ್ ಪಕ್ಷವು ಹಿಂದಿನಿಂದ ಕುಮ್ಮಕ್ಕು ನೀಡುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ತುರ್ತುಸಭೆ ನಡೆಸಿದ್ದು, ರಸಗೊಬ್ಬರ ಸಮಸ್ಯೆ ಕುರಿತು ಚರ್ಚೆ ನಡೆಸಿದ್ದಾರೆ.
ಮತ್ತಷ್ಟು
ಮೇಲ್ಮನೆ ಪ್ರವೇಶಕ್ಕೆ ವಾಟಾಳ್ ಯತ್ನ
ರಾಜ್ಯಕ್ಕೆ 4 ಪ್ರಶಸ್ತಿ ಕನ್ನಡದ ಹೆಮ್ಮೆ:ನಾಗಾಭರಣ
ರಸಗೊಬ್ಬರ ಪ್ರತಿಭಟನೆ: ಗೋಲಿಬಾರ್‌ಗೆ 1 ಬಲಿ
ರಸಗೊಬ್ಬರ ಪ್ರತಿಭಟನೆ: 4ಬಸ್‌ಗಳಿಗೆ ಬೆಂಕಿ
ಭರವಸೆಗೆ ಕಾದ ಗ್ರಾಮಸ್ಥರು: ನಿರ್ಮಿಸಿದರು ರಸ್ತೆ
ಶೀಘ್ರವೇ ಪ್ರಾಥಮಿಕ ಶಿಕ್ಷಕರ ನೇಮಕ: ಕಾಗೇರಿ