ರಸಗೊಬ್ಬರ ಸಮಸ್ಯೆಯಿಂದಾಗಿ ಉಂಟಾಗಿರುವ ಗಲಭೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ರೈತರ ಹಿತ ಕಾಪಾಡಲು ಸದಾ ಬದ್ಧವಾಗಿದೆ. ಆದರೆ, ರಾಷ್ಟ್ತ್ರಪತಿ ಆಳ್ವಿಕೆಯ ಸಂದರ್ಭದಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆಪಾದಿಸಿದ್ದಾರೆ.
ನಿನ್ನೆ ನಡೆದಿರುವ ಘಟನೆಯಿಂದ ಧಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದ ಅವರು, ನೂತನ ಸರ್ಕಾರದ ಅಗ್ನಿಪರೀಕ್ಷೆ ನಡೆಯಸುತ್ತಿದೆ. ಸಮಸ್ಯೆಯ ದುರ್ಲಾಭ ಪಡೆಯಲು ಯತ್ನಿಸಿದರೆ ಉಗ್ರಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಯಮದ ವರದಿ ನೀಡುವಂತೆ ಮಾಧ್ಯಮಗಳಿಗೆ ಮನವಿ ಮಾಡಿದರು.
ಹಾವೇರಿಗೆ ಭೇಟಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೃತಪಟ್ಟ ಸಿದ್ದಲಿಂಗಪ್ಪ ಚೂರಿ ಕುಟುಂಬವನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸಾಂತ್ವನ ಮಾತುಗಳನ್ನು ಹೇಳಿದ್ದಾರೆ. ಮೃತರ ಪತ್ನಿಗೆ ಸರ್ಕಾರಿ ಕೆಲಸ ನೀಡುವುದು ಹಾಗೂ ಮಕ್ಕಳಿಗೆ ಸರ್ಕಾರ ಉಚಿತ ವಿದ್ಯಾಭ್ಯಾಸ ನೀಡಲಾಗುವುದು ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಹೊನ್ನಾಳ್ಳಿ ಬಂದ್ ಈ ಮಧ್ಯೆ ಹಾವೇರಿಯಲ್ಲಿ ನಡೆದಿರುವ ಘಟನೆಯನ್ನು ಖಂಡಿಸಿ ಜೆಡಿಎಸ್ ರೈತರ ಸಂಘದಿಂದ ಇಂದು ಹೊನ್ನಾಳ್ಳಿ ಬಂದ್ ಕರೆ ನೀಡಿದ್ದು, ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದೆ.
|