ಕಬ್ಬಿಗೆ ಬೆಂಬಲ ಬೆಲೆ ಕುರಿತು ಸಕ್ಕರೆ ಕಂಪೆನಿಗಳ ಮಾಲೀಕರು ಹಾಗೂ ನಿರ್ದೇಶಕರ ಸಭೆಯನ್ನು ಜೂನ್ 16ರಂದು ಕರೆಯಲಾಗುವುದು ಎಂದು ಸಕ್ಕರೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಇಂಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಟನ್ ಕಬ್ಬಿಗೆ 160 ರೂ. ಬೆಂಬಲ ಬೆಲೆ ನೀಡಲು ರಾಷ್ಟ್ರಪತಿ ಆಳ್ವಿಕೆ ಅವಧಿಯಲ್ಲಿಯೇ ತೀರ್ಮಾನವಾಗಿತ್ತು. ಆದರೆ ಇದುವರೆಗೆ ಬಿಡುಗಡೆಯಾಗಿಲ್ಲ. ಮಾಲೀಕರ ಸಮಸ್ಯೆ ಆಲಿಸಲು ಈಗ ಮತ್ತೆ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಪ್ರವೇಶ ತೆರಿಗೆ ವಿನಾಯಿತಿಯಿಂದ ಕಂಪೆನಿಗಳಿಗೆ 60ರೂ. ಉಳಿತಾಯವಾಗಲಿದೆ. 100ರೂ. ಹೆಚ್ಚುವರಿ ಹೊರೆಯಾಗಲಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ಈ ಬಗ್ಗೆ ಸಕ್ಕರೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸಕ್ಕರೆ ಕಂಪೆನಿಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಹಾಗೂ ಕಾರ್ಮಿಕರ ಹಣ ಬಿಡುಗಡೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
|