ಪರಿಸ್ಥಿತಿ ಉದ್ರೇಕಕಾರಿಯಾಗಿದ್ದರೂ ಅಥವಾ ಕೆರಳಿಸುವಂತಿದ್ದರೂ,ರಸಗೊಬ್ಬರ ಕೊರತೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರ ಮೇಲೆ ಗೋಲಿಬಾರ್ ನಡೆಸದಂತೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪೊಲೀಸರಿಗೆ ಆದೇಶಿಸಿದ್ದಾರೆ. ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ರೈತನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಪರಿಸ್ಥಿತಿ ಯಾವುದೇ ಇರಲಿ ಪೊಲೀಸರು ರೈತರ ಮೇಲೆ ಗುಂಡು ಹಾರಿಸಕೂಡದು. ಇದು ಪೊಲೀಸರಿಗೆ ನೀಡುವ ಆದೇಶವಾಗಿದೆ ಎಂದು ಗೋಲಿಬಾರ್‌ನಲ್ಲಿ ಮೃತಪಟ್ಟ ರೈತ ಸಿದ್ಧಲಿಂಗಪ್ಪ ಅವರ ಸಂಬಂಧಿಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಯಡಿಯೂರಪ್ಪ ತಿಳಿಸಿದರು.
ಪರಿಹಾರಾರ್ಥವಾಗಿ ಮೃತರ ಕುಟುಂಬಕ್ಕೆ 200,000 ರೂಪಾಯಿಯ ಚೆಕ್ ನೀಡಿದ ಅವರು, ಮೃತರ ಕುಟುಂಬದ ಒಂದು ಸದಸ್ಯನಿಗೆ ಉದ್ಯೋಗ ಕೊಡುವುದಾಗಿ ಈ ವೇಳೆ ಭರವಸೆ ನೀಡಿದರು.
ಈ ನಡುವೆ, ರಸಗೊಬ್ಬರ ಬಿಕ್ಕಟ್ಟು ಕುರಿತಂತೆ, ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಬುಧವಾರ ಸಂಜೆ ನವದೆಹಲಿಗೆ ತೆರಳಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
|