ಹಾವೇರಿಯಲ್ಲಿ ನಡೆದ ಗೋಲಿಬಾರ್ ಪ್ರಕರಣದಲ್ಲಿ ಮೃತಪಟ್ಟ ಸಿದ್ಲಿಂಗಪ್ಪ ಚೂರಿ ಮನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಇಂದು ಮೃತ ರೈತ ಚೂರಿ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಪಕ್ಷದ ವತಿಯಿಂದ ಮೃತಪಟ್ಟವರ ಮಕ್ಕಳ ಹೆಸರಿನಲ್ಲಿ 2 ಲಕ್ಷ ರೂ. ಠೇವಣಿ ಇಡಲಾಗುವುದು ಎಂದು ಘೋಷಿಸಿದರು.
ಅಲ್ಲದೆ, ಈ ಘಟನೆಗೆ ರಾಜಕೀಯ ಪಿತೂರಿ ನಡೆಸಲಾಗಿದೆ ಎಂಬ ಮಾಹಿತಿಗಳನ್ನು ನೀಡುತ್ತಿರುವುದನ್ನು ಬಿಟ್ಟು ಸರ್ಕಾರ ಮೊದಲು ಘಟನೆ ಬಗ್ಗೆ ದಾಖಲಾಗಿರುವ ಗುಪ್ತ ಮಾಹಿತಿಯನ್ನು ಬಹಿರಂಗ ಪಡಿಸಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯ ಸರ್ಕಾರ ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರ ನಿಧಾನಗತಿಯ ಕಾರ್ಯಗಳೇ ಇಂತಹ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
|