ಜಿಲ್ಲೆಯಾದ್ಯಂತ ಹರಡಿರುವ ಚಿಕೂನ್ ಗುನ್ಯಾ ಕಾಯಿಲೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ಅವರು, ಚಿಕೂನ್ಗುನ್ಯಾ ಪೀಡಿತ ತಾಲೂಕುಗಳ ಎಲ್ಲಾ ಸರಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಕೇಂದ್ರಗಳಲ್ಲಿ ದಿನದ 24 ತಾಸುಗಳ ಕಾಲ ಕಾರ್ಯ ನಿರ್ವಹಿಸಲು ವೈದ್ಯಕೀಯ ಸೇವಾ ಕೌಂಟರ್‌ಗಳನ್ನು ತೆರೆಯಲು ತಕ್ಷಣದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಮಾಡಿ ಚಿಕೂನ್ಗೂನ್ಯಾ ಪೀಡಿತರ ಯೋಗಕ್ಷೇಮ ವಿಚಾರಿಸಿದರು.
ಹಾವೇರಿಯಲ್ಲಿನ ಗೋಲಿಬಾರ್ ಪ್ರಕರಣದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಎದುರಾಗಿರುವ ರಸಗೊಬ್ಬರ ಕೊರತೆ, ರೈತರ ಪ್ರತಿಭಟನೆಗೆ ರಾಜ್ಯಪಾಲರೇ ನೇರ ಹೊಣೆಯಾಗುತ್ತಾರೆ ಎಂದು ಆರೋಪಿಸಿದರು.
|