ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪತ್ನಿ ಹತ್ಯೆಗೆ ಮಹಿಳಾ ಸುಪಾರಿ ಕಿಲ್ಲರ್‌ಗಳು  Search similar articles
ಬೆಂಗಳೂರು: ಅನೈತಿಕ ಸಂಬಂಧದ ವಿಚಾರದಲ್ಲಿ ವ್ಯಕ್ತಿಯೊಬ್ಬರಿಂದ ಎರಡು ಲಕ್ಷ ರೂ. ಸುಪಾರಿ ಹಣ ಪಡೆದು ಗೃಹಿಣಿಯೊಬ್ಬಳ ಕೊಲೆಗೆ ಪ್ರಯತ್ನ ನಡೆಸಿದ ಮೂವರು ಸುಪಾರಿ ಕಿಲ್ಲರ್ ಮಹಿಳೆಯರನ್ನು ಚಂದ್ರಾಲೇಓಟ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲ್ಯಾಣನಗರದ ರೋಹಿಣಿ, ಪಲ್ಲವಿ ಮತ್ತು ಕಾವ್ಯ ಎನ್ನುವವರು ಬಂಧಿತ ಆರೋಪಿಗಳಾಗಿದ್ದಾರೆ. ಆದರ್ಶನಗರದ ಅನಿತಾ ಎನ್ನುವವರ ಮನೆಗೆ ನುಗ್ಗಿ ಚಾಕುವಿನಿಂದ ಕೊಲೆಗೆ ಪ್ರಯತ್ನ ನಡೆಸಿದ ಆರೋಪದಲ್ಲಿ ಈ ಮೂವರು ಕಿಲ್ಲರ್ ನಾರಿಯರನ್ನು ಬಂಧಿಸಲಾಗಿದೆ.

ಅನಿತಾ ಅವರ ಪತಿ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಿ ಪ್ರಕಾಶ್ ಕುಮಾರ್ ಎನ್ನುವ ವ್ಯಕ್ತಿಯೇ ಪತ್ನಿಯ ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಆದರ ಆತ ತಲೆಮರೆಸಿಕೊಂಡಿದ್ದಾನೆ. ಈತ ಪರಸ್ತ್ರೀಯರೊಡನೆ ಅಕ್ರಮ ಸಂಬಂಧ ಬೆಳೆಸಿಕೊಂಡಿರುವುದನ್ನು ಅನಿತಾ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲ್ಲಲು ಪ್ರಕಾಶ್ ಈ ಕೃತ್ಯ ಎಸಗಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

ಇತ್ತೀಚೆಗಷ್ಟೆ ಇವರಿಬ್ಬರ ನಡುವೆ ಈ ವಿಚಾರದಲ್ಲಿ ತೀವ್ರ ಘರ್ಷಣೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅನಿತಾ ಮನೆಗೆ ಬುರ್ಖಾ ಹಾಕಿಕೊಂಡು ಮಾರುವೇಷದಲ್ಲಿ ಬಂದು ಮನೆಯೊಳಗೆ ನುಗ್ಗಿದ ಮೂರು ಮಹಿಳೆಯರು, ಅನಿತಾ ಮೇಲೆ ಖಾರದ ಪುಡಿ ಎರಚಿ ಕೊಲೆಗೆ ಯತ್ನಿಸಿದಾಗ ತಪ್ಪಿಸಿಕೊಂಡ ಅನಿತಾ, ಹೊರಬಂದು ಕೂಗಿಕೊಂಡರು. ಆಗ ಸಾರ್ವಜನಿಕರು ಗುಂಪು ಸೇರಿ ರೋಹಿಣಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಮತ್ತಷ್ಟು
ಚಿಕನ್‌ಗುನ್ಯಾ: ಸೂಕ್ತ ಕ್ರಮಕ್ಕೆ ಶ್ರೀರಾಮುಲು ಆದೇಶ
ಅಕ್ರಮ ಗೊಬ್ಬರ ದಾಸ್ತಾನು: ಮಾಹಿತಿ ನೀಡಿದವರಿಗೆ ಬಹುಮಾನ
ಕುಮಾರಸ್ವಾಮಿಯಿಂದ ಮೃತ ರೈತನ ಕುಟುಂಬ ಭೇಟಿ
ರಾಷ್ಟ್ರಪತಿ ಆಳ್ವಿಕೆ ನಿರ್ಲಕ್ಷ್ಯ: ಡಿವಿ ಆರೋಪ
ಗೋಲಿಬಾರ್ ಪ್ರಕರಣಕ್ಕೆ ಮುಖ್ಯಮಂತ್ರಿ ಹೊಣೆ: ಖರ್ಗೆ
ರೈತರ ಮೇಲೆ ಗೋಲಿಬಾರ್ ನಡೆಸಬೇಡಿ: ಯಡಿಯೂರಪ್ಪ