ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಲಿಬಾರ್: ಜೂ.16ಕ್ಕೆ ರಾಜ್ಯವ್ಯಾಪಿ ಪ್ರತಿಭಟನೆ  Search similar articles
ಹಾವೇರಿಯಲ್ಲಿ ನಡೆದಿರುವ ಗೋಲಿಬಾರ್ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆಯನ್ನು ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಮೇಲೆ ನಡೆದಿರುವ ಅನ್ಯಾಯದ ವಿರುದ್ಧ ಇದೇ ತಿಂಗಳ 16ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

ಕೆಪಿಸಿಸಿ ವತಿಯಿಂದ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತನ ಮಕ್ಕಳಿಗೆ 2 ಲಕ್ಷರೂ. ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಘಟನೆಗೆ ರಾಜಕೀಯ ಕೈವಾಡ ಇದೆ ಎಂದು ಹೇಳಿಕೊಳ್ಳುವ ಮೂಲಕ ಮುಖ್ಯಮಂತ್ರಿಗಳು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರವು ರೈತರ ಪ್ರತಿಭಟನೆಯನ್ನು ರಾಜಕೀಯಕ್ಕೆ ಹೋಲಿಸುವುದು ಸರಿಯಲ್ಲ ಎಂದು ತಿಳಿಸಿದರು.
ಮತ್ತಷ್ಟು
ಪತ್ನಿ ಹತ್ಯೆಗೆ ಮಹಿಳಾ ಸುಪಾರಿ ಕಿಲ್ಲರ್‌ಗಳು
ಚಿಕನ್‌ಗುನ್ಯಾ: ಸೂಕ್ತ ಕ್ರಮಕ್ಕೆ ಶ್ರೀರಾಮುಲು ಆದೇಶ
ಅಕ್ರಮ ಗೊಬ್ಬರ ದಾಸ್ತಾನು: ಮಾಹಿತಿ ನೀಡಿದವರಿಗೆ ಬಹುಮಾನ
ಕುಮಾರಸ್ವಾಮಿಯಿಂದ ಮೃತ ರೈತನ ಕುಟುಂಬ ಭೇಟಿ
ರಾಷ್ಟ್ರಪತಿ ಆಳ್ವಿಕೆ ನಿರ್ಲಕ್ಷ್ಯ: ಡಿವಿ ಆರೋಪ
ಗೋಲಿಬಾರ್ ಪ್ರಕರಣಕ್ಕೆ ಮುಖ್ಯಮಂತ್ರಿ ಹೊಣೆ: ಖರ್ಗೆ