ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಲ್ಮನೆ ಸ್ಥಾನಗಳಿಗೆ ತೀವ್ರ ಪೈಪೋಟಿ  Search similar articles
ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳು ಹಾಗೂ ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ ಏಳು ಸ್ಥಾನಗಳಿಗೆ ಜೂನ್ 26ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳಾಗಲು ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ಪ್ರಾರಂಭವಾಗಿದೆ.

ರಾಜ್ಯದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷಕ್ಕೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸ್ಥಾನಗಳು ಹೆಚ್ಚಾಗಿ ಲಭಿಸಲಿರುವುದರಿಂದ ಸಹಜವಾಗಿಯೇ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ.

ರಾಜಸಭಾ ಸದಸ್ಯರಾದ ಜನಾರ್ಧನ ಪೂಜಾರಿ, ಎಂ.ವಿ. ರಾಜಶೇಖರನ್, ಪ್ರೇಮಾ ಕಾರ್ಯಪ್ಪ ಹಾಗೂ ಉದ್ಯಮಿ ವಿಜಯ್ ಮಲ್ಯ ಅವರ ನಿವೃತ್ತಿಯಿಂದಾಗಿ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಈ ನಾಲ್ಕು ಸ್ಥಾನಗಳಲ್ಲಿ ಪೈಕಿ ಬಿಜೆಪಿಗೆ ಎರಡು ಸ್ಥಾನಗಳನ್ನು ನಿರಾಯಸವಾಗಿ ಗೆಲ್ಲಬಹುದಾಗಿದೆ. ಈ ನಿಟ್ಟಿನಲ್ಲಿ ನಿವೃತ್ತ ರಾಜ್ಯಪಾಲ ರಾಮ್ ಜೋಯಿಸ್, ವಾಮನಾಚಾರ್ಯ ಹಾಗೂ ಶಿಕ್ಷಣ ತಜ್ಞ ಪ್ರೊ. ಎಂ. ಆರ್. ದೊರೆಸ್ವಾಮಿ ನಾಯ್ಡು ಅವರುಗಳು ಹೆಸರುಗಳು ಕೇಳಿ ಬರುತ್ತಿದೆ.

ಈ ಮಧ್ಯೆ, ವಿಧಾನ ಪರಿಷತ್ತಿನ ಏಳು ಸ್ಥಾನಗಳ ಪೈಕಿ ಪಕ್ಷೇತರ ಬೆಂಬಲದೊಂದಿಗೆ ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆಯಬಹುದಾಗಿದೆ. ಕಾಂಗ್ರೆಸ್‌ಗೆ ಎರಡು ಸ್ಥಾನಗಳು ಹಾಗೂ ಉಳಿದಿರುವ ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಬಹುದಾಗಿದೆ.
ಮತ್ತಷ್ಟು
ಗೋಲಿಬಾರ್: ಜೂ.16ಕ್ಕೆ ರಾಜ್ಯಾವ್ಯಾಪಿ ಪ್ರತಿಭಟನೆ
ಪತ್ನಿ ಹತ್ಯೆಗೆ ಮಹಿಳಾ ಸುಪಾರಿ ಕಿಲ್ಲರ್‌ಗಳು
ಚಿಕನ್‌ಗುನ್ಯಾ: ಸೂಕ್ತ ಕ್ರಮಕ್ಕೆ ಶ್ರೀರಾಮುಲು ಆದೇಶ
ಅಕ್ರಮ ಗೊಬ್ಬರ ದಾಸ್ತಾನು: ಮಾಹಿತಿ ನೀಡಿದವರಿಗೆ ಬಹುಮಾನ
ಕುಮಾರಸ್ವಾಮಿಯಿಂದ ಮೃತ ರೈತನ ಕುಟುಂಬ ಭೇಟಿ
ರಾಷ್ಟ್ರಪತಿ ಆಳ್ವಿಕೆ ನಿರ್ಲಕ್ಷ್ಯ: ಡಿವಿ ಆರೋಪ