ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಖ್ಯಮಂತ್ರಿ ಹೆಸರಲ್ಲಿ ಅರ್ಚನೆ: ಸಚಿವರಿಗೆ 'ಪೂಜೆ'  Search similar articles
ರಾಜ್ಯದ 34 ಸಾವಿರ ದೇವಾಲಯಗಳು ಮುಖ್ಯಮಂತ್ರಿ ಯಡಿಯೂರಪ್ಪನವರ ಹೆಸರಿನಲ್ಲಿ ಪೂಜೆ ಮಾಡಬೇಕು ಎಂದು ದೇವಾಲಯಗಳಿಗೆ ಸುತ್ತೋಲೆ ಕಳುಹಿಸಿದ ಮುಜರಾಯಿ ಖಾತೆ ಸಚಿವ ಶೆಟ್ಟಿ ಅವರಿಗೆ ಗುರುವಾರದ ಸಚಿವ ಸಂಪುಟ ಸಭೆ ಮಂಗಳಾರತಿ ಮಾಡಿದೆ.

ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಇವರ ಬಾಲಿಶ ಕ್ರಮವನ್ನು ಟೀಕಿಸಿದ್ದಾರೆ. ಸಿಎಂ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ. ಇದರ ಬದಲಿಗೆ ರಾಜ್ಯದ ಜನರ ಕಲ್ಯಾಣಕ್ಕಾಗಿ ಪೂಜೆ ಮಾಡಿಸಲು ಮುಜರಾಯಿ ಇಲಾಖೆಗೆ ಸೂಚಿಸಿದರು ಎಂದು ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗಾರರಿಗೆ ತಿಳಿಸಿದರು.

ಆದರೆ ಸಚಿವ ಶೆಟ್ಟಿ, ಯಡಿಯೂರಪ್ಪನವರ ಮೇಲಿನ ಅಗಾಧ ಪ್ರೀತಿ ತನ್ನ ಈ ನಿಲುವಿಗೆ ಕಾರಣವಾಯಿತೆಂದು ತಮ್ಮನ್ನು ಸಮರ್ಥಿಸಿಕೊಂಡರು. ಯಡಿಯೂರಪ್ಪನವರಿಂದ ಬೆನ್ನು ತಟ್ಟಿಸಿಕೊಳ್ಳಬೇಕೆಂದಿದ್ದ ಶೆಟ್ಟಿ ಮಂಗಳಾರತಿ ಮಾಡಿಕೊಂಡರು.
ಮತ್ತಷ್ಟು
ರಾಜ್ ಸ್ಮಾರಕಕ್ಕೆ ಸ್ಥಳ ಮಂಜೂರು
ಮೇಲ್ಮನೆ ಸ್ಥಾನಗಳಿಗೆ ತೀವ್ರ ಪೈಪೋಟಿ
ಗೋಲಿಬಾರ್: ಜೂ.16ಕ್ಕೆ ರಾಜ್ಯವ್ಯಾಪಿ ಪ್ರತಿಭಟನೆ
ಪತ್ನಿ ಹತ್ಯೆಗೆ ಮಹಿಳಾ ಸುಪಾರಿ ಕಿಲ್ಲರ್‌ಗಳು
ಚಿಕನ್‌ಗುನ್ಯಾ: ಸೂಕ್ತ ಕ್ರಮಕ್ಕೆ ಶ್ರೀರಾಮುಲು ಆದೇಶ
ಅಕ್ರಮ ಗೊಬ್ಬರ ದಾಸ್ತಾನು: ಮಾಹಿತಿ ನೀಡಿದವರಿಗೆ ಬಹುಮಾನ