ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರಿ ಕೊಲೆ: ರೈತ ಸಂಘ  Search similar articles
ರಸಗೊಬ್ಬರ ವಿತರಣೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿ ಒಬ್ಬ ರೈತನ ಸಾವಿಗೆ ಕಾರಣವಾದ ಕ್ರಮವನ್ನು ರೈತಸಂಘದ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್ ಖಂಡಿಸಿದ್ದು, ಇದೊಂದು ಸರ್ಕಾರಿ ಕೊಲೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿಯಲ್ಲಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದಾಗ ಅಲ್ಲಿ 200 ರಿಂದ 300 ಜನರಿದ್ದರು. ಹಾಗಾಗಿ ಗೋಲಿಬಾರ್ ಅನಿವಾರ್ಯವಾಗಿರಲಿಲ್ಲ ಎಂದರು. ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಅವರ ಸರ್ಕಾರ ರೈತನನ್ನೇ ಗುಂಡಿಕ್ಕಿ ಕೊಲೆ ಮಾಡಿದೆ. ಯಡಿಯೂರಪ್ಪ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣದ ಹಿಂದೆ ರಾಜಕೀಯ ಕೈವಾಡವಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು. ಯಡಿಯೂರಪ್ಪ ಕಣ್ಣೀರಿಡುವ ನಾಟಕ ಮಾಡಿದ್ದಾರೆ. ಇದು ದೇವೇಗೌಡರಿಂದ ಆರಂಭವಾಗಿ ಈಗ ಯಡಿಯೂರಪ್ಪನವರಿಗೆ ವರ್ಗಾವಣೆಗೊಂಡಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಪುಟ್ಟಣ್ಣಯ್ಯ ಲೇವಡಿ ಮಾಡಿದರು.
ಮತ್ತಷ್ಟು
ಮುಖ್ಯಮಂತ್ರಿ ಹೆಸರಲ್ಲಿ ಅರ್ಚನೆ: ಸಚಿವರಿಗೆ 'ಪೂಜೆ'
ರಾಜ್ ಸ್ಮಾರಕಕ್ಕೆ ಸ್ಥಳ ಮಂಜೂರು
ಮೇಲ್ಮನೆ ಸ್ಥಾನಗಳಿಗೆ ತೀವ್ರ ಪೈಪೋಟಿ
ಗೋಲಿಬಾರ್: ಜೂ.16ಕ್ಕೆ ರಾಜ್ಯವ್ಯಾಪಿ ಪ್ರತಿಭಟನೆ
ಪತ್ನಿ ಹತ್ಯೆಗೆ ಮಹಿಳಾ ಸುಪಾರಿ ಕಿಲ್ಲರ್‌ಗಳು
ಚಿಕನ್‌ಗುನ್ಯಾ: ಸೂಕ್ತ ಕ್ರಮಕ್ಕೆ ಶ್ರೀರಾಮುಲು ಆದೇಶ