ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿ ನೇರ ಸಂಪುಟದರ್ಜೆ ಸಚಿವ ಪದವಿಯನ್ನು ತನ್ನದಾಗಿಸಿಕೊಂಡ ಶೋಭಾ ಕರಂದ್ಲಾಜೆ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ! ರಾಜ್ಯ ಸಚಿವ ಸಂಪುಟದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವ ಮೂಲಕ ಸರ್ಕಾರದಲ್ಲಿ ತಾನೇನು ಕಮ್ಮಿಯಿಲ್ಲ ಎಂದು ತೋರಿಸಿದ್ದಾರೆ.
ಸಾಮಾನ್ಯವಾಗಿ ಸಚಿವ ಸಂಪುಟದ ವಿವರಗಳನ್ನು ವಾರ್ತಾ ಇಲಾಖೆ ಹೊಣೆ ಹೊತ್ತಿರುವ ಸಚಿವರು ಸುದ್ದಿಗಾರರಿಗೆ ತಿಳಿಸುತ್ತಾರೆ ಅಥವಾ ಯಾವ ಇಲಾಖೆಗೆ ಸಂಬಂಧಪಟ್ಟ ವಿಷಯ ಚರ್ಚೆ ಅಥವಾ ಅನುಷ್ಠಾನವಾಯಿತು ಆ ಇಲಾಖೆಯ ಸಚಿವರು ತಿಳಿಸುವುದು ರೂಢಿ. ಆದರೆ ಗುರುವಾರ ನಡೆದ ಸಂಪುಟ ಸಭೆಯ ವಿವರಗಳನ್ನು ಶೋಭಾ ಕರಂದ್ಲಾಜೆ ಪ್ರಕಟಿಸುವ ಮೂಲಕ ಸುದ್ದಿಗಾರರ ಹುಬ್ಬೇರಿಸಿದರು.
ಶೋಭಾ ಕರಂದ್ಲಾಜೆ ಸಮ್ಮೇಳನ ಸಭಾಂಗಣಕ್ಕೆ ಸುದ್ದಿಗೋಷ್ಠಿಗಾಗಿ ಗೃಹಸಚಿವ ವಿ.ಎಸ್ ಆಚಾರ್ಯ ಅವರೊಂದಿಗೆ ಆಗಮಿಸಿದರು. ಮುಖ್ಯಮಂತ್ರಿ ಅಥವಾ ಹಿರಿಯ ಸಚಿವರು ಕೂರುವ ಗಂಢಬೇರುಂಡ ಲಾಂಛನವಿರುವ ಆಸನದಲ್ಲಿ ಶೋಭಾ ಕುಳಿತಾಗ ಎಲ್ಲರಿಗೂ ಅಚ್ಚರಿ. ಸಚಿವ ಆಚಾರ್ಯ ಪಕ್ಕದಲ್ಲಿ ಕುಳಿತರು. ನಂತರ ಶೋಭಾ ಸುದ್ದಿಗೋಷ್ಠಿ ನಡೆಸಿದರು. ತಬ್ಬಿಬ್ಬಾದಾಗ ಶೋಭಾ ಆಚಾರ್ಯ ನೆರವು ಪಡೆದರು.
ಸಾಮಾನ್ಯವಾಗಿ ಮಹಿಳಾ ಸಚಿವರ ಪಡೆಯುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಪಡೆಯದೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಪಡೆದಾಗಲೇ ಅಚ್ಚರಿಯುಂಟು ಮಾಡಿದ್ದರು. ಈಗ ಇನ್ನೊಂದು ಅಚ್ಚರಿ
|