ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಿಸ್ಥಿತಿ ನಿಯಂತ್ರಣಕ್ಕೆ:ಸಿ.ಎಂ.ಉದಾಸಿ  Search similar articles
ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ರಸಗೊಬ್ಬರಗಳನ್ನು ಪೂರೈಸಲು ಸರಕಾರವು ವಿಸ್ತೃತ ಏರ್ಪಾಟುಗಳನ್ನು ಮಾಡಿದ ಫಲವಾಗಿ, ರಸಗೊಬ್ಬರ ಪೂರೈಕೆ ಕೊರತೆಯನ್ನು ವಿರೋಧಿಸಿ ಹಾವೇರಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯು ಈಗ ಸಾಮಾನ್ಯ ಸ್ಥಿತಿಗೆ ತಲುಪಿದೆ ಎಂದು ಕರ್ನಾಟಕ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉದಾಸಿ, ಮುಂಚಿತ ಮುಂಗಾರು ಆಗಮನದಿಂದಾಗಿ ಹಾವೇರಿ, ಧಾರವಾಡ, ಮತ್ತು ಗದಗ ಜಿಲ್ಲೆಗಳಲ್ಲಿ ರೈತರಿಂದ ರಸಗೊಬ್ಬರ ಬೇಡಿಕೆಯು ಹೆಚ್ಚಿಗೆಗೊಂಡಿದ್ದು, ಜಿಲ್ಲಾಡಳಿತವು ಇದಕ್ಕೆ ಸಿದ್ಧಗೊಂಡಿರಲಿಲ್ಲ ಎಂದು ಹೇಳಿದರು.

ರಾಷ್ಟ್ರಪತಿ ಆಡಳಿತದ ಸಂದರ್ಭದಲ್ಲಿ ರಸಗೊಬ್ಬರ ಬೇಡಿಕೆಯ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ರಸಗೊಬ್ಬರ ಕೊರತೆಗೆ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿದ ಅವರು, ಸಂಬಂಧಪಟ್ಟು ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದರು.
ಮತ್ತಷ್ಟು
ರಾಜಶೇಖರನ್ ಭೇಟಿಗೆ ವಿಶೇಷ ಅರ್ಥವಿಲ್ಲ: ಗೌಡ
ಶಾಸಕ ರಘುಪತಿ ಭಟ್ ಪತ್ನಿ ನಾಪತ್ತೆ
ಸರಕಾರಂ ಸಂಪೂರ್ಣ ಶೋಭಾಮಯಂ!
ಪರಪ್ಪನ ಅಗ್ರಹಾರದಲ್ಲಿ ಬಡಿದಾಡಿದ ಕೈದಿಗಳು
ವಿಪತ್ತು ನಿರ್ವಹಣಾ ವಸ್ತುಪ್ರದರ್ಶನಕ್ಕೆ ಚಾಲನೆ
ದೆಹಲಿಗೆ ತೆರಳಿದ ಯಡಿಯೂರಪ್ಪ,ಡಿವಿಎಸ್