ಮುಖ್ಯಮಂತ್ರಿ ಯಡಿಯೂರಪ್ಪನವರ ಲಕ್ಕಿ ಮನೆ ಈಗ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾಲಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಅನುಗ್ರಹಕ್ಕೆ ಯಡಿಯೂರಪ್ಪ ಸ್ಥಳಾಂತರಗೊಂಡ ನಂತರ ಅವರು ಈಗ ಇರುವ ನಿವಾಸಕ್ಕೆ ಶೋಭಾ ತೆರಳುವರು.
ಒಟ್ಟು 14 ಮಂದಿ ಸಚಿವರಿಗೆ ಸರ್ಕಾರದ ಅಧಿಕೃತ ನಿವಾಸಗಳನ್ನು ಹಂಚಿಕೆ ಮಾಡಲಾಗಿದ್ದು, ಶೋಭಾ ಕರಂದ್ಲಾಜೆ ರೇಸ್ಕೋರ್ಸ್ ಯಡಿಯೂರಪ್ಪನವರ ಮನೆಯನ್ನೇ ಆರಿಸಿಕೊಂಡಿದ್ದಾರೆ. ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗಲೂ ಯಡಿಯೂರಪ್ಪ ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲೇ ವಾಸಿಸುತ್ತಿದ್ದರು. ಮುಖ್ಯಮಂತ್ರಿಯಾಗಿ, ಅಧಿಕಾರ ಹೋದಾಗಲೂ ಅವರು ಈ ನಿವಾಸ ಬಿಟ್ಟಿರಲಿಲ್ಲ. ಈ ಸರ್ಕಾರಿ ನಿವಾಸಕ್ಕೆ ಮಾಸಿಕ 2.5 ಲಕ್ಷ ರೂ. ಬಾಡಿಗೆ ನೀಡಿ, ಅಲ್ಲೆ ವಾಸಿಸುತ್ತಿದ್ದರು.
ಖಾತೆ ಹಂಚಿಕೆಯಲ್ಲಿಯೂ ಕ್ಯಾತೆ ತೆಗೆಯದೆ ತಮಗೆ ಬೇಕಾದ ಖಾತೆಯನ್ನು ಪಡೆದ ಶೋಭಾ ತಮಗೆ ಬೇಕಾದ ಆಪ್ತ ಕಾರ್ಯದರ್ಶಿಯನ್ನು ಮುಂಚಿತವಾಗಿಯೇ ನೇಮಿಸಿಕೊಂಡಿದ್ದರು. ಈಗ ವಿಧಾನಸೌದದಲ್ಲಿ ಇವರ ದರ್ಬಾರು ಜೋರಾಗಿಯೇ ಇದೆ. ಅಂತೂ ಇಂತೂ ಶೋಭಾಗೆ ಫುಲ್ ಡಿಮ್ಯಾಂಡ್.
|