ತೀವ್ರ ಕುತೂಹಲ ಕೆರಳಿಸಿರುವ ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರ ನಾಪತ್ತೆ ಪ್ರಕರಣವನ್ನು ಒಂದು ಪೂರ್ವ ನಿಯೋಜಿತ ಘಟನೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ವಿ.ಎಸ್. ಆಚಾರ್ಯ, ಈ ಅಪಹರಣದ ಹಿಂದೆ ನಕ್ಸಲೀಯರ ಕೈವಾಡವಿರುವ ಶಂಕೆ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಕ್ಸಲರ ಹಾವಳಿ ಅಷ್ಟಾಗಿ ಇಲ್ಲ. ಅದೊಂದು ಅರಣ್ಯ ಪ್ರದೇಶ ಎಂದ ಮಾತ್ರಕ್ಕೆ ನಕ್ಸಲರು ಬೀಡು ಬಿಟ್ಟಿದ್ದಾರೆ ಎಂಬುದು ಸರಿಯಲ್ಲ. ಅಲ್ಲದೆ, ನಕ್ಸಲರು ಈ ಪ್ರದೇಶದಲ್ಲಿ ಇರುವ ಬಗ್ಗೆ ಯಾವುದೇ ಸುಳಿವಿಲ್ಲ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಶಾಸಕ ರಘುಪತಿ ಭಟ್ ಮನೆಗೆ ಹಲವು ಬಿಜೆಪಿ ನಾಯಕರ ಭೇಟಿ ನೀಡಿ ಸಾಂತ್ವನ ನೀಡಿದರು. ಹಿರಿಯ ಮುಖಂಡ ಮುಖ್ಯಮಂತ್ರಿ ಚಂದ್ರು, ಡಾ. ವಿ.ಎಸ್. ಆಚಾರ್ಯ ಸೇರಿದಂತೆ ಪಕ್ಷದ ಹಲವು ಮುಖಂಡರು ರಘುಪತಿ ಭಟ್ ಮನೆಗೆ ತೆರಳಿದ್ದಾರೆ.
|