ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀರಾವರಿ ಯೋಜನೆಗೆ ಒತ್ತು: ಯಡಿಯೂರಪ್ಪ  Search similar articles
ಕಳಸಾ ಬಂಡೂರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ ಅವರು ಸ್ಥಳದಲ್ಲಿಯೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಅಂತೆಯೇ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಚುನಾವಣಾ ಪೂರ್ವದಲ್ಲಿ ತಿಳಿಸಲಾಗಿರುವ ಪ್ರಣಾಳಿಕೆ ಅಂಶವನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಹಲವಾರು ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವ ಸಂಬಂಧ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲು ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಶೀಘ್ರದಲ್ಲಿ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಮತ್ತಷ್ಟು
ವಿದ್ಯುತ್ ತಂತಿ ತಗಲಿ ಇಬ್ಬರ ಸಾವು
ಅಭಿವೃದ್ದಿಗೆ ಸಹಕರಿಸದಿದ್ದರೆ ಉಗ್ರ ಹೋರಾಟ: ಬಿಎಸ್‌ವೈ
ಶಾಸಕ ಪತ್ನಿ ಪದ್ಮಪ್ರಿಯಾ ಪತ್ತೆ
ಪ್ರಕೃತಿ ವಿಕೋಪ ತಡೆಗೆ ಸಿದ್ಧತೆ ಅಗತ್ಯ: ಶಿವರಾಜ್
ಗೋಲಿಬಾರ್ ನ್ಯಾಯಾಂಗ ತನಿಖೆಗೆ ಗೌಡ ಆಗ್ರಹ
ಶಾಸಕರ ಪತ್ನಿ ನಾಪತ್ತೆಯಲ್ಲಿ ನಕ್ಸಲ್ ಕೈವಾಡವಿಲ್ಲ: ವಿ.ಎಸ್