ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದ್ಮಪ್ರಿಯಾ ಸಾವು: ಆಚಾರ್ಯ ರಾಜೀನಾಮೆಗೆ ಒತ್ತಾಯ  Search similar articles
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಸದಾ ಸಂಕಷ್ಟಕ್ಕೆ ಸಿಲುಕಿಸಲು ತವಕಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪದ್ಮಪ್ರಿಯಾ ಸಾವು ಒಂದು ಆಯುಧ ಸಿಕ್ಕಾಂತಾಗಿದೆ. ಇತ್ತೀಚೆಗೆ ಹಾವೇರಿ ಪ್ರಕರಣವನ್ನು ಹಿಡಿದು ಜಗ್ಗಾಡಿದ ಪ್ರತಿಪಕ್ಷಗಳು ಈಗ ಶಾಸಕರ ಪತ್ನಿಯ ಸಾವನ್ನು ಹಿಡಿದು ಸರ್ಕಾರವನ್ನು ಅಲ್ಲಾಡಿಸಲು ಮುಂದಾಗಿವೆ.

ಪದ್ಮಪ್ರಿಯಾ ಸಾವಿನ ವಿಷಯ ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ನಿಜಕ್ಕೂ ಇದೊಂದು ದುರಂತ ಸಾವು. ಶನಿವಾರ ಪದ್ಮಪ್ರಿಯಾ ಸುರಕ್ಷಿತವಾಗಿದ್ದರೆ ಎಂದು ಸರ್ಕಾರ ಹೇಳಿತ್ತು. ಆದರೆ ಈಗ ಘಟನೆ ದು:ಖಾಂತ್ಯಗೊಂಡಿದೆ. ಸರ್ಕಾರದ ಸುರಕ್ಷತೆ ಅಂದರೆ ಇದೇನಾ ಎಂಬ ಅನುಮಾನ ಬರುತ್ತದೆ ಎಂದ ಖರ್ಗೆ, ಒಬ್ಬ ಶಾಸಕನ ಪತ್ನಿಗೆ ರಕ್ಷಣೆ ಕೊಡಲು ಸಾಧ್ಯವಾಗದ ಸರ್ಕಾರ ಇನ್ನೂ ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ನೀಡಲು ಸಾಧ್ಯ. ಯಡಿಯೂರಪ್ಪ ಸರ್ಕಾರ ಪ್ರತಿ ಅಂಶಗಳಲ್ಲೂ ಎಡವುತ್ತಿದೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಗೃಹಸಚಿವರಿಗೆ ತಮ್ಮ ಜಿಲ್ಲೆಯ ಶಾಸಕರ ಪತ್ನಿಗೆ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ. ಸಚಿವ ವಿ.ಎಸ್.ಆಚಾರ್ಯ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದಿದ್ದಾರೆ.

ಆದರೆ ಸಚಿವ ಆಚಾರ್ಯ, ಮಾಧ್ಯಮಗಳ ದುಡುಕಿನಿಂದಾಗಿ ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಧ್ಯಮಗಳು ತಾಳ್ಮೆ ವಹಿಸಿದ್ದರೆ, ಸಿಹಿಸುದ್ದಿಯೊಂದು ದೊರೆಯುತಿತ್ತು ಎಂದಿದ್ದಾರೆ.

ಯಡಿಯೂರಪ್ಪ ಮುಳ್ಳಿನ ಹಾಸಿಗೆಯಲ್ಲಿ ಮಲಗಿದಂತಾಗಿದೆ.ಇತ್ತೀಚೆಗಷ್ಟೇ ರೈತರು ರಸಗೊಬ್ಬರಕ್ಕಾಗಿ ಬೀದಿಗಿಳಿದು ಹೋರಾಟ ನಡೆಸಿ ಸರ್ಕಾರಕ್ಕೆ ದೊಡ್ಡ ಸವಾಲೊಡ್ಡಿದರು. ಈಗ ಬಿಜೆಪಿ ಸರ್ಕಾರವಿರುವಾಗಲೇ ಬಿಜೆಪಿ ಶಾಸಕನೋರ್ವನ ಪತ್ನಿಯನ್ನು ಪತ್ತೆಹಚ್ಚುವಲ್ಲಿ ಸರ್ಕಾರ ವಿಫಲವಾಗಿದೆ.
ಮತ್ತಷ್ಟು
ಪದ್ಮಪ್ರಿಯಾ ಸಾವಿನ ಸುತ್ತ ಸಂದೇಹಗಳ ಹುತ್ತ
ನ್ಯಾಯಾಂಗ ತನಿಖೆಗೆ ಸರ್ಕಾರದ ಆದೇಶ
ಜೂಜಾಡುತ್ತಿದ್ದವರ ಮೇಲೆ ಲಾಠಿಚಾರ್ಜ್
ಮೈತ್ರಿಗೆ ಅಹ್ವಾನ ಬಂದಿಲ್ಲ: ವೈಎಸ್.ವಿ ದತ್ತಾ
ನೀರಾವರಿ ಯೋಜನೆಗೆ ಒತ್ತು: ಯಡಿಯೂರಪ್ಪ
ವಿದ್ಯುತ್ ತಂತಿ ತಗಲಿ ಇಬ್ಬರ ಸಾವು