ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಪಿಂಗ್ ಕಾಂಪ್ಲೆಕ್ಸ್ ಪುನರ್‌ನಿರ್ಮಾಣ  Search similar articles
ಇತ್ತೀಚೆಗೆ ಬೆಂಕಿಗಾಹುತಿಯಾದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ಪುನರ್ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಕಿಗಾಹುತಿಯಾದ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿದ ಅವರು, ಮುಂದಿನ ಮೂರು ತಿಂಗಳೊಳಗೆ ಅನಾಹುತಕ್ಕೊಳಗಾಗಿರುವ ಕಟ್ಟಡವನ್ನು ಪುನರ್ ನಿರ್ಮಿಸಲು ಬಿಬಿಎಂಪಿಗೆ ಸೂಚಿಸಿದೆ ಎಂದರು. ಕಾಮಗಾರಿ ಪುರ್ಣಗೊಂಡ ನಂತರ ಹಿಂದೆ ಯಾರು ಈ ಪ್ರದೇಶದಲ್ಲಿ ಅಂಗಡಿ ನಡೆಸುತ್ತಿದ್ದರೋ ಅವರಿಗೆ ನೀಡಲಾಗುತ್ತದೆ. ಜಾಗ ಬದಲಿಸಲು ಅವಕಾಶ ಕೊಡುವುದಿಲ್ಲ ಎಂದರು.

ಬೆಂಕಿ ಅನಾಹುತದಿಂದ ಅನೇಕ ಅಂಗಡಿ ಮಾಲೀಕರು ನಷ್ಟ ಅನುಭವಿಸಿದ್ದಾರೆ. ಅವರಿಗೆ ತಲಾ 50 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದರು. ಈಗಾಗಲೇ 10 ಸಾವಿರ ರೂಪಾಯಿಯನ್ನು ತಾತ್ಕಾಲಿಕ ಪರಿಹಾರ ಧನವಾಗಿ ನೀಡಲಾಗಿದೆ. ಉಳಿದ 40 ಸಾವಿರ ರೂ.ವನ್ನು ಮಂಗಳವಾರದೊಳಗಡೆ ನೀಡುವುದಾಗಿ ಭರವಸೆ ನೀಡಿದರು.

ಬಡ ವ್ಯಾಪಾರಿಗಳು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದರೆ. ಅಂತಹವರಿಗೆ ಯಾವುದೇ ತೊಂದರೆಯಾಗದಂತೆ ಸದ್ಯಕ್ಕೆ ಬೇರೆ ವ್ಯವಸ್ಥೆ ಮಾಡಲಾಗುವುದು ಎಂದರು.
ಮತ್ತಷ್ಟು
ಪದ್ಮಪ್ರಿಯಾ ಸಾವು: ಆಚಾರ್ಯ ರಾಜೀನಾಮೆಗೆ ಒತ್ತಾಯ
ಪದ್ಮಪ್ರಿಯಾ ಸಾವಿನ ಸುತ್ತ ಸಂದೇಹಗಳ ಹುತ್ತ
ನ್ಯಾಯಾಂಗ ತನಿಖೆಗೆ ಸರ್ಕಾರದ ಆದೇಶ
ಜೂಜಾಡುತ್ತಿದ್ದವರ ಮೇಲೆ ಲಾಠಿಚಾರ್ಜ್
ಮೈತ್ರಿಗೆ ಅಹ್ವಾನ ಬಂದಿಲ್ಲ: ವೈಎಸ್.ವಿ ದತ್ತಾ
ನೀರಾವರಿ ಯೋಜನೆಗೆ ಒತ್ತು: ಯಡಿಯೂರಪ್ಪ