ಜುಲೈ ನಾಲ್ಕರಿಂದ ಧಾರವಾಡದಲ್ಲಿ ಉದ್ಘಾಟನೆಗೊಳ್ಳಲಿರುವ ಹೈಕೋರ್ಟ್ ಸಂಚಾರಿ ಪೀಠ ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸಲಿದೆ. ಸಂಚಾರಿ ಪೀಠದ ಕಾಮಗಾರಿಯನ್ನು ವೀಕ್ಷಿಸಿದ ನ್ಯಾ. ಬನ್ನೂರು ಮಠ ಐದು ನ್ಯಾಯಮೂರ್ತಿಗಳು ಐದು ಸಭಾಂಗಣದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸಾರ್ವಜನಿಕ ಹಿತಾಸಕ್ತಿ ಹಾಗೂ ಕಂಪೆನಿ ಸಂಬಂಧಿತ ಪ್ರಕರಣಗಳನ್ನು ಹೊರತು ಪಡಿಸಿ ಉಳಿದ ಹೊಸ ಮೊಕದ್ದಮೆಗಳ ವಿಚಾರಣೆ ಈ ಪೀಠದಲ್ಲಿ ನಡೆಯಲಿದೆ. ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಕೋಟೆ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯ ವಿಚಾರಣೆ ಧಾರವಾಡ ಸಂಚಾರಿ ಪೀಠದಲ್ಲಿ ನಡೆಯಲಿದೆ ಎಂದು ಬನ್ನೂರು ಮಠ ತಿಳಿಸಿದರು.
ಬಿಜಾಪುರ, ಬೀದರ್, ಗುಲ್ಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಗುಲ್ಬರ್ಗಾ ಸಂಚಾರಿ ನಡೆಯಲಿದೆ. ಧಾರವಾಡ ಸಂಚಾರಿ ಪೀಠದ ಕಾಮಗಾರಿಗೆ ಸರ್ಕಾರ 35 ಕೋಟಿ ರೂ. ಬಿಡುಗಡೆ ಮಾಡಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದ್ದಾರೆ.
ಹೈಕೋರ್ಟ್ ಸಚಿವಾಲಯದ ಸಿಬ್ಬಂದಿಗಳು ಧಾರವಾಡ ಹಾಗೂ ಗುಲ್ಬರ್ಗಾ ಸಂಚಾರಿ ಪೀಠದಲ್ಲಿ ಕಾರ್ಯನಿರ್ವಹಿಸಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
|