ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಮೇಲಾಧಿಕಾರಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಧಾರವಾಡದ ಸಹಾಯಕ ಗ್ರಂಥಪಾಲಕಿ ಶೋಭಾ ತನ್ನ ಮೇಲಾಧಿಕಾರಿ ಮಾರಿಳಮ್ಮನವರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇಲ್ಲಿ ಈ ಹಿಂದೆಯೂ ಇಂತಹ ಪ್ರಕರಣ ದಾಖಲಾಗಿತ್ತು.
ಆದರೆ, ಮಾರಿಕಳಮ್ಮ ಈ ಆರೋಪವನ್ನು ತಲ್ಲಿ ಹಾಕಿದ್ದಾರೆ. ಶೋಭಾ ಸರಿಯಾದ ಸಮಯಲ್ಲಿ ಕೆಲಸಕ್ಕೆ ಬಾರದ್ದನ್ನು ಅವರ ಗಮನಕ್ಕ ತಂದ ಕಾರಣ ಕೋಪದಿಂದ ಈ ರೀತಿ ಆರೋಪಿಸಿದ್ದಾರೆ ಎಂದಿದ್ದಾರೆ.
ಈ ನಡುವೆ ಸಹಾಯಕ ಗ್ರಂಥಪಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿಶ್ವವಿದ್ಯಾಲಯ ಮುಂದೆ ಧರಣಿ ನಡೆಸಿದೆ. ಈ ಹಿಂದೆ ಕೂಡಾ ಇದೇ ರೀತಿಯ ಘಟನೆ ನಡೆದಿದ್ದು, ಮತ್ತೆ ಮತ್ತೆ ಇದು ಮರುಕಳಿಸುತ್ತಿರುವುದರಿಂದ ಇದರ ಬಗ್ಗೆ ತನಿಖೆ ನಡೆಸಲು ವಿವಿಯಲ್ಲಿ ಸಮಿತಿ ರಚಿಸಲಾಗಿದೆ. ನಿಜಾಂಶ ತನಿಖೆಯ ನಂತರವಷ್ಟೇ ಗೊತ್ತಾಗಬೇಕಾಗಿದೆ.
|