ರಾಜ್ಯ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗಾಗಿ ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇಬ್ಬರು ಸದ್ಯರ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್, ಎಂ.ಸಿ. ನಾಣಯ್ಯ ಹಾಗೂ ಅರಕಲಗೂಡು ನಾರಾಯಣ ಸ್ವಾಮಿ ಅವರನ್ನು ತನ್ನ ಅಭ್ಯರ್ಥಿಗಳೆಂದು ಪ್ರಕಟಿಸಿದೆ.
ಚುನಾವಣೆಯಲ್ಲಿ ಜಯಗಳಿಸಲು ಓರ್ವ ಅಭ್ಯರ್ಥಿಗೆ 29 ಮತಗಳ ಅವಶ್ಯಕತೆ ಇದೆ. 28 ಸದಸ್ಯ ಬಲದ ಜೆಡಿಎಸ್ ಇಬ್ಬರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಅರವನ್ನು ಬೆಂಬಲಿಸುವುದಕ್ಕೆ ಪ್ರತಿಯಾಗಿ ಪರಿಷತ್‌ನಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಪಡೆಯುವ ಒಪ್ಪಂದ ಜೆಡಿಎಸ್-ಕಾಂಗ್ರೆಸ್ ನಡುವೆ ಆಗಿದೆ.
ಕಾಂಗ್ರೆಸ್ನಿಂದ ಎಂ.ವಿ. ರಾಜಶೇಖರನ್ ವಿಧಾನ ಪರಿಷತ್‌ಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಎನ್.ಶಂಕರಪ್ಪ, ಸಿದ್ದರಾಜು, ಭಾರತೀ ಶೆಟ್ಟಿ, ವಿ.ಎಸ್. ಆಚಾರ್ಯ ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟು 7 ಸ್ಥಾನಗಳಿಗೆ 7 ನಾಮಪತ್ರಗಳಷ್ಟೇ ಸಲ್ಲಿಕೆಯಾಗಿರುವುದರಿಂದ ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
|