"ಅತುಲ್ ನನ್ನ ಸ್ನೇಹಿತ.. ನನ್ನ ಮನೆಯನ್ನೂ ಅವನೇ ಕಟ್ಟಿಸಿದ್ದ.. ಆದರೆ ಆತ ಹೀಗೆ ಮಾಡುತ್ತಾನೆಂದು ನಾನು ಊಹಿಸಿರಲಿಲ್ಲ..." ಎಂದು ಉಡುಪಿ ಶಾಸಕ ರಘುಪತಿ ಭಟ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದರೊಂದಿಗೆ ಪದ್ಮಪ್ರಿಯಾ ಅವರ ನಿಗೂಢ ಸಾವಿನ ಪ್ರಕರಣ ಹೊಸ ತಿರುವು ಪಡೆದಿದೆ.
ರಾಷ್ಟ್ರವ್ಯಾಪಿ ಕುತೂಹಲಕ್ಕೆ ಕಾರಣವಾಗಿರುವ ಈ ಪ್ರಕರಣದ ಕುರಿತು ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಾಯಿ ತೆರೆದ ರಘುಪತಿ ಭಟ್, "ಪದ್ಮಪ್ರಿಯಾ ಮೇಲೆ ನನಗೆ ಈಗಲೂ ಪ್ರೇಮವಿದೆ. ಆದರೆ, ಅತುಲ್ ಆಕೆಯನ್ನು ಬಲವಂತದಿಂದ ದೆಹಲಿಗೆ ಕರೆದೊಯ್ದಿದ್ದಾನೆ" ಎಂದು ಆರೋಪಿಸಿದ್ದಾರೆ.
|