ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
100ದಿನದೊಳಗಾಗಿ ಪ್ರಣಾಳಿಕೆ ಜಾರಿ: ಯಡಿಯೂರಪ್ಪ  Search similar articles
ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಿಸಿರುವ ಅಂಶಗಳನ್ನು ನೂರು ದಿನಗಳ ಒಳಗಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ತಿಳಿಸಿರುವ ಅಂಶಗಳನ್ನು ಜಾರಿ ಮಾಡಲು ಅಧಿಕಾರಿಗಳು ಸಹಕರಿಸಬೇಕು. ತಮ್ಮ ವೇಗಕ್ಕೆ ನೀವು ಹೆಜ್ಜೆ ಹಾಕಬೇಕು ಎಂದು ತಿಳಿಸಿದ್ದಾರೆ.

ಹೊಸ ಸರ್ಕಾರದ ಮುಂದಿರುವ ಗುರಿಗಳು ಮತ್ತು ಆದ್ಯತೆಗಳೇನೆಂಬುದನ್ನು ಪಕ್ಷದ ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ. ಇದನ್ನು ಸಾಕಾರಗೊಳಿಸುವ ದಿಸೆಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ಅವರು ತಿಳಿಸಿದರು.

ರಸಗೊಬ್ಬರ ಪೂರೈಕೆಯಲ್ಲಿ ಆಗಿರುವ ಆವಾಂತರ ಮತ್ತೆ ಎಂದೂ ರಾಜ್ಯದಲ್ಲಿ ನಡೆಯಬಾರದು. ಯಾವ ಹಂತದಲ್ಲೂ ರೈತರು ಸಂಕಷ್ಟಕ್ಕೆ ಸಿಲುಕದ ರೀತಿಯಲ್ಲಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅವರು ಹಿರಿಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮತ್ತಷ್ಟು
ಜೆಡಿಎಸ್ ಜತೆ ಹೊಂದಾಣಿಕೆ: ಸಿದ್ದರಾಮಯ್ಯ ಸಿಡಿಮಿಡಿ
ಮಿತ್ರದ್ರೋಹಿ ಅತುಲ್: ರಘುಪತಿ ಭಟ್
ಇದು ಶುದ್ಧ ಸುಳ್ಳು: ಪದ್ಮಪ್ರಿಯಾ ಸಹೋದರ
ಮೇಲ್ಮನೆ ಚುನಾವಣೆ: ನಾಮಪತ್ರಸಲ್ಲಿಕೆ
ಮೇಲ್ಮನೆ ಚುನಾವಣೆ: 'ಕೈ' ಜೋಡಿಸಿದ ಜೆಡಿಎಸ್
ಪಕ್ಷದ ಹಿರಿಯರ ವಿರುದ್ಧ ಮತ್ತೊಮ್ಮೆ ಸೋಮಣ್ಣ ಟೀಕೆ