ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ ವಿವಾದ: ಮುಂದುವರಿದ ಪ್ರತಿಭಟನೆ  Search similar articles
ರಸಗೊಬ್ಬರ ಪೂರೈಕೆಗಾಗಿ ರೈತರ ಪ್ರತಿಭಟನೆ ಮತ್ತೆ ಭುಗಿಲೆದ್ದಿದ್ದು, ಮಂಗಳವಾರ ಜಿಲ್ಲೆಯಲ್ಲಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆಗಿಳಿದಿದ್ದಾರೆ.

ಜಿಲ್ಲೆಯ ರಸ್ತೆ ಹೆದ್ದಾರಿ ನಾಲ್ಕರಲ್ಲಿ ರಸ್ತೆ ತಡೆ ನಡೆಸಿದ ರೈತರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ನೀಡಿರುವ ಭರವಸೆಗಳು ಸುಳ್ಳಾಗಿದೆ. ಇದುವರೆಗೆ ಯಾವ ರೈತನಿಗೆ ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರಗಳು ದೊರೆತಿಲ್ಲ ಎಂದು ಆರೋಪಿಸಿದ್ದಾರೆ.

ಈ ಪ್ರತಿಭಟನೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬಂದಿದೆ. ಅಲ್ಲದೆ, ಗಾಂಧಿ ವೃತ್ತದ ಬಳಿ ಜಮಾಯಿಸಿದ್ದ ರೈತರು ಸರ್ಕಾರ ರೈತರ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಅಧಿಕಾರಿಗಳ ಭರವಸೆಯಿಂದಾಗಿ ಶಾಂತವಾಗಿದ್ದ ದಾವಣಗೆರೆಯಲ್ಲಿ ರೈತರಿಗೆ ರಸಗೊಬ್ಬರ ದೊರೆಯದೇ ಇದ್ದುದರಿಂದ ರಸಗೊಬ್ಬರಕ್ಕಾಗಿ ಮತ್ತೆ ಪ್ರತಿಭಟನೆ ವ್ಯಕ್ತವಾಗಿದೆ.
ಮತ್ತಷ್ಟು
ಉಡುಪಿಗೆ ಬಂದ ಪದ್ಮಪ್ರಿಯಾ ಪಾರ್ಥಿವ ಶವ
100ದಿನದೊಳಗಾಗಿ ಪ್ರಣಾಳಿಕೆ ಜಾರಿ: ಯಡಿಯೂರಪ್ಪ
ಜೆಡಿಎಸ್ ಜತೆ ಹೊಂದಾಣಿಕೆ: ಸಿದ್ದರಾಮಯ್ಯ ಸಿಡಿಮಿಡಿ
ಮಿತ್ರದ್ರೋಹಿ ಅತುಲ್: ರಘುಪತಿ ಭಟ್
ಇದು ಶುದ್ಧ ಸುಳ್ಳು: ಪದ್ಮಪ್ರಿಯಾ ಸಹೋದರ
ಮೇಲ್ಮನೆ ಚುನಾವಣೆ: ನಾಮಪತ್ರಸಲ್ಲಿಕೆ