ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದ್ಯವೇ ಪೆಟ್ರೋಲಿಯಂ ತೆರಿಗೆ ನಿರ್ಧಾರ: ಆಚಾರ್ಯ  Search similar articles
NRB
ಪೆಟ್ರೋಲ್, ಡೀಸೆಲ್ ಸ್ಥಳೀಯ ತೆರಿಗೆ ಕಡಿತಗೊಳಿಸುವ ಕುರಿತಂತೆ, ರಾಜ್ಯ ಸರಕಾರದ ನಿಲುವೇನೆಂಬುದನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ಸ್ಪಷ್ಟ ಪಡಿಸಿದ್ದಾರೆ.

ಇದೇ ಗುರುವಾರದಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸ್ಥಳೀಯ ತೆರಿಗೆಗಳನ್ನು ಕಡಿತಗೊಳಿಸುವುದರಿಂದ ಆಗುವ ಆದಾಯ ನಷ್ಟದಲ್ಲಿ ಅರ್ಧ ಭಾಗವನ್ನು ಕೇಂದ್ರ ಸರಕಾರ ಭರಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಣಕಾಸು ಸಚಿವರ ಸಭೆಯಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದ ಅವರು, ಪೆಟ್ರೋಲ್ ಮಲೆ ವಿಧಿಸಲಾಗಿರುವ ಪ್ರವೇಶ ತೆರಿಗೆ ಅಥವಾ ಮಾರಾಟ ತೆರಿಗೆ ಇವರೆಡರಲ್ಲಿ ಯಾವುದನ್ನು ಕಡಿಮೆ ಮಾಡಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಮತ್ತಷ್ಟು
ಪದ್ಮಪ್ರಿಯ ಪ್ರಕರಣವನ್ನು ಮುಚ್ಚಿಡುವ ಅಗತ್ಯವಿಲ್ಲ:ಆಚಾರ್ಯ
ಮೇಲ್ಮನೆ: ನಾಮಪತ್ರ ಪರಿಶೀಲನೆ
ಪದ್ಮಪ್ರಿಯಾ ಪ್ರಕರಣ : ಸಿಬಿಐ ತನಿಖೆಗೆ ಒತ್ತಾಯ
ರಸಗೊಬ್ಬರ ವಿವಾದ: ಮುಂದುವರಿದ ಪ್ರತಿಭಟನೆ
ಉಡುಪಿಗೆ ಬಂದ ಪದ್ಮಪ್ರಿಯಾ ಪಾರ್ಥಿವ ಶವ
100ದಿನದೊಳಗಾಗಿ ಪ್ರಣಾಳಿಕೆ ಜಾರಿ: ಯಡಿಯೂರಪ್ಪ