ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಣಿಜ್ಯ ಮಂಡಲಿ ಚುನಾವಣೆ: ಜಯಮಾಲ, ಹರೀಶ್ ಕಣದಲ್ಲಿ  Search similar articles
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಲಿ ಚುನಾವಣೆ ಇದೇ ತಿಂಗಳ 28ರಂದು ನಡೆಯಲಿದ್ದು, ನಿರ್ಮಾಪಕರ ವಲಯದ ಪಾಲಾಗಿರುವ ಅಧ್ಯಕ್ಷ ಸ್ಥಾನಕ್ಕಾಗಿ ನಟಿ ಜಯಮಾಲ ಹಾಗೂ ಬಾ.ಮಾ. ಹರೀಶ್ ನಡುವೆ ಸ್ಪರ್ಧೆಯೇರ್ಪಟ್ಟಿದೆ.

ಈಗಾಗಲೇ ಇವರಿಬ್ಬರು ಅಧ್ಯಕ್ಷ ಸ್ಥಾನಕ್ಕಾಗಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನಟಿ ಜಯಮಾಲ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಈ ವರ್ಷ ಮಹಿಳಾ ವರ್ಷ ಹಾಗಾಗಿ ಉದ್ಯಮದ ಎಲ್ಲರೂ ತಮಗೆ ಸಹಕಾರ ನೀಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಈ ಬಾರಿ ಮಹಿಳೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಕಳೆದ 35 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಕಲಾವಿದೆಯಾಗಿ ನಿರ್ಮಾಪಕಿಯಾಗಿರುವುದರಿಂದ ಈ ವಲಯದ ಸಮಸ್ಯೆಗಳ ಅರಿವಿದೆ. ಅವುಗಳನ್ನು ಬಗೆಹರಿಸಲು ಪ್ರಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಬಾ.ಮಾ. ಹರೀಶ್, ಎಲ್ಲಾ ಕನ್ನಡ ಚಿತ್ರಗಳಿಗೆ ಸಹಾಯಧನವನ್ನು ಸರಕಾರದಿಂದ ಕೊಡಿಸುವುದು ಹಾಗೂ ಚಿತ್ರಮಂದಿರದಿಂದ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವುದು ತಮ್ಮ ಪ್ರಥಮ ಆದ್ಯತೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಸದ್ಯವೇ ಪೆಟ್ರೋಲಿಯಂ ತೆರಿಗೆ ನಿರ್ಧಾರ: ಆಚಾರ್ಯ
ಪದ್ಮಪ್ರಿಯ ಪ್ರಕರಣವನ್ನು ಮುಚ್ಚಿಡುವ ಅಗತ್ಯವಿಲ್ಲ:ಆಚಾರ್ಯ
ಮೇಲ್ಮನೆ: ನಾಮಪತ್ರ ಪರಿಶೀಲನೆ
ಪದ್ಮಪ್ರಿಯಾ ಪ್ರಕರಣ : ಸಿಬಿಐ ತನಿಖೆಗೆ ಒತ್ತಾಯ
ರಸಗೊಬ್ಬರ ವಿವಾದ: ಮುಂದುವರಿದ ಪ್ರತಿಭಟನೆ
ಉಡುಪಿಗೆ ಬಂದ ಪದ್ಮಪ್ರಿಯಾ ಪಾರ್ಥಿವ ಶವ