ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕ ಪೊಲೀಸರಿಂದ ಅತುಲ್ ವಿಚಾರಣೆ  Search similar articles
ಪದ್ಮಪ್ರಿಯಾ ಸಾವಿನ ಪ್ರಕರಣದ ಪ್ರಮುಖ ಆರೋಪಿ ಎಂದೇ ಪರಿಗಣಿಸಲಾಗಿರುವ ಅತುಲ್‌ನನ್ನು ಪೊಲೀಸರು ನಗರಕ್ಕೆ ಕರೆದುಕೊಂಡು ಬಂದಿದ್ದಾರೆ.

ಪದ್ಮಪ್ರಿಯಾ ದಿಲ್ಲಿಯ ವಸತಿ ಗೃಹದಲ್ಲಿ ಮೃತಪಟ್ಟಿದ್ದರಿಂದ ದಿಲ್ಲಿಯ ಪೊಲೀಸರು ಅತುಲ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿರುವುದರಿಂದ ಅತುಲ್‌ನನ್ನು ನಿರ್ದೋಷಿ ಎಂದು ಪರಿಗಣಿಸಲಾಗಿತ್ತು.

ಆದರೆ ಕರ್ನಾಟಕ ಪೊಲೀಸರು ವಿಚಾರಣೆಯನ್ನು ಕೈಗೆತ್ತಿಕೊಂಡಿರುವುದರಿಂದ ಅತುಲ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಈ ಮಧ್ಯೆ, ಈ ಪ್ರಕರಣದ ಬಳಿಕ ನಿಗೂಢವಾಗಿ ಕಣ್ಮರೆಯಾಗಿರುವ ಅತುಲ್ ರಾವ್ ಅವರನ್ನು ನ್ಯಾಯಾಲಯದೆದುರು ಹಾಜರುಪಡಿಸುವಂತೆ ಆತನ ಪತ್ನಿ ಮೀರಾ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಅತುಲ್ ಅವರನ್ನು ಬಂಧಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ. ಬಂಧಿಸಿದ್ದೇ ಆದರೆ ಈವರೆಗೆ ನ್ಯಾಯಾಲಯಕ್ಕೆ ಏಕೆ ಹಾಜರು ಪಡಿಸಿಲ್ಲ ಎಂದು ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಈ ಹೇಬಿಯಸ್ ಕಾರ್ಪಸ್ ಅರ್ಜಿ ಇಂದು ಅಥವಾ ನಾಳೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.
ಮತ್ತಷ್ಟು
ಎಫ್‌ಡಿಎ ಪ್ರಶ್ನೆಪತ್ರಿಕೆ ಬಹಿರಂಗ ಆರೋಪ, ಮರು ಪರೀಕ್ಷೆಗೆ ಆಗ್ರಹ
ವಾಣಿಜ್ಯ ಮಂಡಲಿ ಚುನಾವಣೆ: ಜಯಮಾಲ, ಹರೀಶ್ ಕಣದಲ್ಲಿ
ಸದ್ಯವೇ ಪೆಟ್ರೋಲಿಯಂ ತೆರಿಗೆ ನಿರ್ಧಾರ: ಆಚಾರ್ಯ
ಪದ್ಮಪ್ರಿಯ ಪ್ರಕರಣವನ್ನು ಮುಚ್ಚಿಡುವ ಅಗತ್ಯವಿಲ್ಲ:ಆಚಾರ್ಯ
ಮೇಲ್ಮನೆ: ನಾಮಪತ್ರ ಪರಿಶೀಲನೆ
ಪದ್ಮಪ್ರಿಯಾ ಪ್ರಕರಣ : ಸಿಬಿಐ ತನಿಖೆಗೆ ಒತ್ತಾಯ