ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಬಕಾರಿ ಉಪಾಯುಕ್ತರ ಮನೆಗೆ ಲೋಕಾಯುಕ್ತ ದಾಳಿ  Search similar articles
ಅಬಕಾರಿ ಉಪ ಆಯುಕ್ತ ಎಸ್. ಕೃಷ್ಣಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಒಂದು ಕೋಟಿ ರೂ. ನಗದು ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಎಸ್. ನಾಗರಾಜು ಎನ್ನುವವರ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಕೃಷ್ಣಕುಮಾರ್ ಅವರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಅಪಾರ ಪ್ರಮಾಣ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.

ಪತ್ತೆಯಾದ ಯಥೇಚ್ಛ ಹಣವನ್ನು ತಡರಾತ್ರಿಯವರೆಗೂ ಲೆಕ್ಕ ಮಾಡುತ್ತಿದ್ದ ಲೋಕಾಯುಕ್ತ ಪೊಲೀಸರು ಆರೋಪಿ ಎಸ್. ಕೃಷ್ಣ ಕುಮಾರ್ ರಾತ್ರಿಯೇ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಜಿಲ್ಲೆಯ ಭಾರತೀನಗರದಲ್ಲಿ ವೈನ್ ಸ್ಟೌರ್ ನಡೆಸುತ್ತಿದ್ದ ಎಸ್. ನಾಗರಾಜು, ವೈನ್ಸ್ಟೌರ್ ಪರವಾನಗಿಯನ್ನು ತಮ್ಮ ಬೆಟ್ಟಯ್ಯ ಅವರ ಹೆಸರಿನಿಂದ ತಾಯಿ ಹೆಸರಿಗೆ ಬದಲಿಸಿಕೊಡುವಂತೆ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು.

ಈ ಸಂಬಂಧ ತನ್ನಿಂದ ಕೃಷ್ಣಕುಮಾರ್ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ ನಾಗರಾಜು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಗರಾಜು ಅವರಿಂದ ಕೃಷ್ಣ ಕುಮಾರ್ ಲಂಚ ಸ್ವೀಕರಿಸುತ್ತಿದ್ದಾಗಲೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಕೃಷ್ಣ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಮತ್ತಷ್ಟು
ನಗರ ಅಭಿವೃದ್ದಿಗೆ ಮುಖ್ಯಮಂತ್ರಿ ಗಮನ
ಕರ್ನಾಟಕ ಪೊಲೀಸರಿಂದ ಅತುಲ್ ವಿಚಾರಣೆ
ಎಫ್‌ಡಿಎ ಪ್ರಶ್ನೆಪತ್ರಿಕೆ ಬಹಿರಂಗ ಆರೋಪ, ಮರು ಪರೀಕ್ಷೆಗೆ ಆಗ್ರಹ
ವಾಣಿಜ್ಯ ಮಂಡಲಿ ಚುನಾವಣೆ: ಜಯಮಾಲ, ಹರೀಶ್ ಕಣದಲ್ಲಿ
ಸದ್ಯವೇ ಪೆಟ್ರೋಲಿಯಂ ತೆರಿಗೆ ನಿರ್ಧಾರ: ಆಚಾರ್ಯ
ಪದ್ಮಪ್ರಿಯ ಪ್ರಕರಣವನ್ನು ಮುಚ್ಚಿಡುವ ಅಗತ್ಯವಿಲ್ಲ:ಆಚಾರ್ಯ