ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಲಿಬಾರ್ ಪ್ರಕರಣ: 3.5ಲಕ್ಷ ಪರಿಹಾರ ಧನ  Search similar articles
ಗೋಲಿಬಾರ್ ಪ್ರಕರಣದಲ್ಲಿ ಮೃತಪಟ್ಟ ಹಾಗೂ ಗಾಯಾಳುಗಳ ಕುಟುಂಬಗಳನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬುಧವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ಘಟನೆಯಲ್ಲಿ ಮೃತಪಟ್ಟ ಸಿದ್ಲಿಂಗಪ್ಪ ಚೂರಿ ಮನೆಗೆ ಭೇಟಿ ನೀಡಿದ ದೇವೇಗೌಡರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಪುಟ್ಟಪ್ಪ ಹೊನ್ನತ್ತಿ ಮನೆಗೆ ಭೇಟಿ ನೀಡಿದ ಅವರು ಕುಟುಂಬಕ್ಕೆ ಪಕ್ಷದ ವತಿಯಿಂದ 3.5 ಲಕ್ಷ ಸಹಾಯ ಧನ ನೀಡುವುದಾಗಿ ಘೋಷಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಅವರು, ರೈತರ ಮೇಲೆ ನಡೆಸಿರುವ ಗೋಲಿಬಾರ್ ಖಂಡನೀಯವಾಗಿದೆ. ಈ ಬಗ್ಗೆ ಸರ್ಕಾರ ರೈತರಲ್ಲಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ಈ ಮೊದಲು ಪ್ರಕರಣದಲ್ಲಿ ಮೃತಪಟ್ಟ ಚೂರಿ ಕುಟುಂಬಕ್ಕೆ ಜೆಡಿಎಸ್ ಪಕ್ಷದ ವತಿಯಿಂದ 2 ಲಕ್ಷರೂ. ಮೊತ್ತದ ಚೆಕ್ಕನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ್ದರು.
ಮತ್ತಷ್ಟು
ಅಬಕಾರಿ ಉಪಾಯುಕ್ತರ ಮನೆಗೆ ಲೋಕಾಯುಕ್ತ ದಾಳಿ
ನಗರ ಅಭಿವೃದ್ದಿಗೆ ಮುಖ್ಯಮಂತ್ರಿ ಗಮನ
ಕರ್ನಾಟಕ ಪೊಲೀಸರಿಂದ ಅತುಲ್ ವಿಚಾರಣೆ
ಎಫ್‌ಡಿಎ ಪ್ರಶ್ನೆಪತ್ರಿಕೆ ಬಹಿರಂಗ ಆರೋಪ, ಮರು ಪರೀಕ್ಷೆಗೆ ಆಗ್ರಹ
ವಾಣಿಜ್ಯ ಮಂಡಲಿ ಚುನಾವಣೆ: ಜಯಮಾಲ, ಹರೀಶ್ ಕಣದಲ್ಲಿ
ಸದ್ಯವೇ ಪೆಟ್ರೋಲಿಯಂ ತೆರಿಗೆ ನಿರ್ಧಾರ: ಆಚಾರ್ಯ