ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ ವಿವಾದ: ರೈತ ಆತ್ಮಹತ್ಯೆ  Search similar articles
ರಸಗೊಬ್ಬರಕ್ಕಾಗಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಬುಧವಾರ ನಡೆದ ಧರಣಿಯ ವೇಳೆ ರೈತನೋರ್ವ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧರಣಿಯಲ್ಲಿ ಪಾಲ್ಗೊಂಡಿದ್ದ, ಕೋಮಾರಹಳ್ಳಿ ನಿವಾಸಿ ಹಿರೆಬಿದರಿ ಅಜ್ಜಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅಜ್ಜಪ್ಪ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಯಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ರಸ್ತೆ ತಡೆ ನಡೆಸಿದ್ದಾರೆ. ರೈತನ ಸಾವಿಗೆ ಸರ್ಕಾರ ಹೊಣೆಯಾಗಿದೆ. ಸೂಕ್ತ ಸಮಯದಲ್ಲಿ ರೈತರಿಗೆ ರಸಗೊಬ್ಬರ ನೀಡದೆ ಸರ್ಕಾರ ರೈತರಿಗೆ ಅನ್ಯಾಯವೆಸಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಸ್ಥಳದಲ್ಲಿ ಪರಿಸ್ಥಿತಿ ಬಿಗುವಿನ ವಾತಾವರಣ ಕಂಡು ಬಂದಿದ್ದು, ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಮತ್ತಷ್ಟು
ಗೋಲಿಬಾರ್ ಪ್ರಕರಣ: 3.5ಲಕ್ಷ ಪರಿಹಾರ ಧನ
ಅಬಕಾರಿ ಉಪಾಯುಕ್ತರ ಮನೆಗೆ ಲೋಕಾಯುಕ್ತ ದಾಳಿ
ನಗರ ಅಭಿವೃದ್ದಿಗೆ ಮುಖ್ಯಮಂತ್ರಿ ಗಮನ
ಕರ್ನಾಟಕ ಪೊಲೀಸರಿಂದ ಅತುಲ್ ವಿಚಾರಣೆ
ಎಫ್‌ಡಿಎ ಪ್ರಶ್ನೆಪತ್ರಿಕೆ ಬಹಿರಂಗ ಆರೋಪ, ಮರು ಪರೀಕ್ಷೆಗೆ ಆಗ್ರಹ
ವಾಣಿಜ್ಯ ಮಂಡಲಿ ಚುನಾವಣೆ: ಜಯಮಾಲ, ಹರೀಶ್ ಕಣದಲ್ಲಿ