ರಾಜ್ಯದ ಪಾಲಿನ ಯೋಜನಾ ಗಾತ್ರ ಹೆಚ್ಚಿಸುವಂತೆ ಕೇಂದ್ರ ಯೋಜನಾ ಆಯೋಗವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ಯೋಜನಾ ಆಯೋಗದ ಸದಸ್ಯ ಡಾ. ಕಿರಿತ್ ಫಾರೀಕ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 21,751 ಕೋಟಿ ರೂ. ಮೊತ್ತದ ಯೋಜನಾ ಗಾತ್ರವನ್ನು ಹೆಚ್ಚಿಸಬೇಕು ಹಾಗೂ ಕೇಂದ್ರದ ಅನುದಾನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಾಲಮನ್ನಾ ಯೋಜನೆಯಡಿ 1,750 ಕೋಟಿ ರೂ. ಗಳನ್ನು ರಾಜ್ಯಕ್ಕೆ ಮರುಪಾವತಿಸಬೇಕು. ಹಾಗೆಯೇ ಹುಬ್ಬಳ್ಳಿ -ಧಾರವಾಡ ನಗರಗಳಿಗೆ ಕುಡಿಯುವ ನೀರಿನ ಯೋಜನೆಯಾದ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರಕಾರ ಮಂಜೂರಾತಿ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಬೆಂಗಳೂರು ಅಭಿವೃದ್ದಿಗೆ 5 ಸಾವಿರ ಕೋಟಿ ನೀಡಲು ಕೇಂದ್ರ ಮನವಿ ಮಾಡಲಾಗಿದೆ. ಈ ಎಲ್ಲಾ ವಿಷಯಗಳ ಕುರಿತು ಈಗಾಗಲೇ ಯೋಜನಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಅಲ್ಲದೆ, ಶೀಘ್ರದಲ್ಲಿ ಯೋಜನಾ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಲಾಗುವುದು ಎಂದು ಅವರು ತಿಳಿಸಿದರು.
|