ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭಿವೃದ್ಧಿ ಕಾಮಗಾರಿ ಪೂರೈಕೆಗೆ ಕಟ್ಟಾ ತಾಕೀತು  Search similar articles
ಅಭಿವೃದ್ದಿ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಸಂಜಯ್ ನಗರದಲ್ಲಿ ಪ್ರಾರಂಭಿಸಲಾಗಿರುವ ಕಂಪ್ಯೂಟರ್ ಸಾಕ್ಷರತಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಆ ಭಾಗದ ಅಭಿವೃದ್ದಿ ಕಾಮಗಾರಿಗಳನ್ನು ಪರೀಶೀಲಿಸಿದ ಸಂದರ್ಭದಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೇತುವೆ ಕಾಮಗಾರಿಗಳು ಹಲವಾರು ದಿನಗಳಿಂದಲೂ ನೆನೆಗುದಿಗೆ ಬಿದ್ದಿದೆ. ಇದನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ತಿಳಿಸಿದ ಅವರು, ಅವಧಿಯೊಳಗೆ ಕಾಮಗಾರಿಗಳು ಪೂರ್ಣಗೊಳ್ಳದಿದ್ದಲ್ಲಿ, ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಹೂಳು ತುಂಬಿ ಮುಚ್ಚಿ ಹೋಗುತ್ತಿರುವುದು ಮತ್ತು ಸಮೀಪದಲ್ಲೇ ಉದ್ದೇಶಿತ ಪಾರ್ಕ್ ನಿರ್ಮಾಣಗೊಳ್ಳದೇ ಇರುವುದು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತಷ್ಟು
ಅತುಲ್: ಹೇಬಿಯಸ್ ಕಾರ್ಪಸ್ ವಾಪಾಸ್
ಯೋಜನಾ ಗಾತ್ರ ಹೆಚ್ಚಳಕ್ಕೆ ಸಿಎಂ ಆಗ್ರಹ
ರಸಗೊಬ್ಬರ ವಿವಾದ: ರೈತ ಆತ್ಮಹತ್ಯೆ
ಗೋಲಿಬಾರ್ ಪ್ರಕರಣ: 3.5ಲಕ್ಷ ಪರಿಹಾರ ಧನ
ಅಬಕಾರಿ ಉಪಾಯುಕ್ತರ ಮನೆಗೆ ಲೋಕಾಯುಕ್ತ ದಾಳಿ
ನಗರ ಅಭಿವೃದ್ದಿಗೆ ಮುಖ್ಯಮಂತ್ರಿ ಗಮನ