ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತ ಆತ್ಮಹತ್ಯೆಗೆ ಸರಕಾರದ ಬೇಜವಾಬ್ದಾರಿ ಕಾರಣ  Search similar articles
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪ
ರಸಗೊಬ್ಬರಕ್ಕಾಗಿ ಇನ್ನೊಬ್ಬ ರೈತ ಮೃತಪಟ್ಟಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಬುಧವಾರ ಹರಿಹರದಲ್ಲಿ ನಡೆದ ಪ್ರತಿಭಟನೆ ವೇಳೆ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರದ ಬೇಜವಾಬ್ದಾರಿಗೆ ಇನ್ನೊರ್ವ ರೈತ ಬಲಿಯಾಗಿದ್ದಾನೆ ಎಂದು ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ರೈತಸಭೆ ನಡೆಸಬೇಕೆಂದು ಆಗ್ರಹಿಸಿದ ಅವರು, ಸರಕಾರ ಕೂಡಲೇ ಎಚ್ಚೆತ್ತುಕೊಂಡು, ರೈತರಿಗೆ ರಸಗೊಬ್ಬರ ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.

ಈ ಮಧ್ಯೆ ಆಸ್ಪತ್ರೆಯಲ್ಲಿ ಮೃತಪಟ್ಟ ರೈತನ ಕುಟುಂಬ ವರ್ಗದವರ ಗೋಳು ಮುಗಿಲುಮುಟ್ಟಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಆಕ್ರೋಶಗೊಂಡಿರುವ ಪ್ರತಿಭಟನಕಾರರು, ರೈತನ ಕುಟುಂಬವರ್ಗಕ್ಕೆ ಶೀಘ್ರವೇ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಮತ್ತಷ್ಟು
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇಲ್ಲ: ಕಾಗೇರಿ
ಅಭಿವೃದ್ಧಿ ಕಾಮಗಾರಿ ಪೂರೈಕೆಗೆ ಕಟ್ಟಾ ತಾಕೀತು
ಅತುಲ್: ಹೇಬಿಯಸ್ ಕಾರ್ಪಸ್ ವಾಪಾಸ್
ಯೋಜನಾ ಗಾತ್ರ ಹೆಚ್ಚಳಕ್ಕೆ ಸಿಎಂ ಆಗ್ರಹ
ರಸಗೊಬ್ಬರ ವಿವಾದ: ರೈತ ಆತ್ಮಹತ್ಯೆ
ಗೋಲಿಬಾರ್ ಪ್ರಕರಣ: 3.5ಲಕ್ಷ ಪರಿಹಾರ ಧನ