ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತ ಆತ್ಮಹತ್ಯೆ: ಪರಿಹಾರಕ್ಕೆ ಒತ್ತಾಯ  Search similar articles
ರಸಗೊಬ್ಬರಕ್ಕಾಗಿ ಹಿರೇಬಿದರಿ ಅಜ್ಜಪ್ಪನ ಸಾವಿನಿಂದ ರೊಚ್ಚಿಗೆದ್ದಿರುವ ರೈತ ಸಂಘ, ಹಸಿರು ಸೇನೆ ಹಾಗೂ ಇತರ ಸಂಘಟನೆಗಳು ಸರ್ಕಾರ ಪರಿಹಾರ ಧನ ಘೋಷಿಸುವವರೆಗೂ ಮೃತ ರೈತನ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಾವಣಗೆರೆಗೆ ಆಗಮಿಸಿ, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ರೈತರ ಸಂಘಟನೆಗಳು ಆಗ್ರಹಿಸಿವೆ.

ನಗರದ ಜಿಲ್ಲಾ ಆಸ್ಪತ್ರೆಯಿಂದ ಗುರುವಾರ ಮೆರವಣಿಗೆ ಮೂಲಕ ಮೃತರ ದೇಹವನ್ನು ಗಾಂಧಿವೃತ್ತಕ್ಕೆ ತಂದಿಡಲಾಗಿದ್ದು, ಮುಖ್ಯಮಂತ್ರಿಗಳು ಸ್ಥಳಕ್ಕೆ ಧಾವಿಸಿ, ಪರಿಹಾರ ಘೋಷಿಸುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ರೈತರು ತಿಳಿಸಿದ್ದಾರೆ.

ಈ ಮಧ್ಯೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಅಭಾವ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೃಷಿ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಮತ್ತಷ್ಟು
ರೈತ ಆತ್ಮಹತ್ಯೆಗೆ ಸರಕಾರದ ಬೇಜವಾಬ್ದಾರಿ ಕಾರಣ
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇಲ್ಲ: ಕಾಗೇರಿ
ಅಭಿವೃದ್ಧಿ ಕಾಮಗಾರಿ ಪೂರೈಕೆಗೆ ಕಟ್ಟಾ ತಾಕೀತು
ಅತುಲ್: ಹೇಬಿಯಸ್ ಕಾರ್ಪಸ್ ವಾಪಾಸ್
ಯೋಜನಾ ಗಾತ್ರ ಹೆಚ್ಚಳಕ್ಕೆ ಸಿಎಂ ಆಗ್ರಹ
ರಸಗೊಬ್ಬರ ವಿವಾದ: ರೈತ ಆತ್ಮಹತ್ಯೆ