ನಿಷೇಧಿತ ಸಿಮಿ ಸಂಘಟನೆಯೊಂದಿಗೆ ನಂಟು ಆರೋಪದ ಹಿನ್ನೆಲೆಯಲ್ಲಿ 11 ಜನ ಶಂಕಿತ ಉಗ್ರರ ನ್ಯಾಯಾಂಗ ವಿಸ್ತರಣೆಯನ್ನು ಜುಲೈ ಎರಡರವರೆಗೆ ವಿಸ್ತರಿಸಲಾಗಿದೆ.
ಇಲ್ಲಿನ ಜೆಎಂಎಫ್‌ಸಿ ಒಂದನೇ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ನ್ಯಾಯಾಧೀಶ ಎ.ವಿ. ಶ್ರೀನಾಥ್ ಈ ಆದೇಶವನ್ನು ಹೊರಡಿಸಿದ್ದಾರೆ.
ಮಧ್ಯ ಪ್ರದೇಶದ ಇಂದೋರ್ ಜೈಲಿನಿಂದ ಕರೆತಂದ ಶಂಕಿತ ಉಗ್ರರಾದ ಮಹಮ್ಮದ್ ಯಾಸೀನ್, ಮಹ್ಮದ್ ಅನ್ಸಾರಿ, ಮನ್ರೌಜ್ ,ಶ್ಯಾಡೋಲಿ ಹಾಗೂ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಶಂಕಿತ ಉಗ್ರರಾದ ಅಸಾದುಲ್ಲಾ ಆಸಿಫ್, ಮಹಮದ್ ಗೌಸ್, ಯಾಹ್ಯಾಖಾನ್, ಸೇರಿದಂತೆ ಒಟ್ಟು 11 ಮಂದಿಯನ್ನು ಬಿಗಿ ಬಂದೋ ಬಸ್ತ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಈ ಮಧ್ಯೆ ಮಧ್ಯ ಪ್ರದೇಶದ ಇಂದೋರ್ ಜೈಲಿನಲ್ಲಿದ್ದ ನಾಲ್ವರು ಶಂಕಿತ ಉಗ್ರರನ್ನು ಸಿಒಡಿ ವಶಕ್ಕೆ ತೆಗೆದುಕೊಳ್ಳಲು ಅನುಮತಿ ಕೋರಿ, ಸಿಓಡಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಅರ್ಜಿ ಸುಲ್ಲಿಸುವ ಸಾಧ್ಯತೆಗಳಿವೆ. ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ಒಟ್ಟು 16 ಜನರನ್ನು ಬಂಧಿಸಲಾಗಿದ್ದು, ಐವರನ್ನು ಇಂದೋರ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
|