ರಾಜ್ಯ ಸರ್ಕಾರವು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಇದರಿಂದ ಪೆಟ್ರೋಲ್ ಬೆಲೆಯು 1.35ರಷ್ಟು ಬೆಲೆ ಇಳಿಕೆಯಾಗಲಿದೆ.
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬರಲಿದೆ.
ಸರ್ಕಾರ ತಿಳಿಸಿರುವಂತೆ ಪೆಟ್ರೋಲ್‌ಗೆ ಶೇ. 3ರಷ್ಟು ತೆರಿಗೆ ಕಡಿತಗೊಳಿಸಲಾಗಿದ್ದು, ಡೀಸೆಲ್ ಶೇ. 2ರಷ್ಟು ಇಳಿಕೆಗೊಳ್ಳಲಿದೆ. ಈ ಮೂಲಕ ಡೀಸೆಲ್ ದರದಲ್ಲಿ 65 ಪೈಸೆಯಷ್ಟು ಇಳಿಕೆಯಾಗಲಿದೆ.
ಹಾಗೆಯೇ, ಅಡುಗೆ ಅನಿಲಕ್ಕೆ 10.34ರಷ್ಟು ಇಳಿಕೆಯಾಗಲಿದೆ. ದೇಶದಲ್ಲಿ ಅತೀ ದುಬಾರಿ ಪೆಟ್ರೋಲ್ ದರ ರಾಜ್ಯದಲ್ಲಿ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
|