ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಲ್ಮನೆ: ಎಲ್ಲ ಅಭ್ಯರ್ಥಿಗಳ ಅವಿರೋಧ ಆಯ್ಕೆ  Search similar articles
ರಾಜ್ಯಸಭೆ ಹಾಗೂ ವಿಧಾನಪರಿಷತ್ತಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯಸಭೆಯ ನಾಲ್ಕು ಹಾಗೂ ವಿಧಾನ ಪರಿಷತ್‌ನ ಏಳೂ ಮಂದಿ ಅಭ್ಯರ್ಥಿಗಳೂ ಅವಿರೋಧ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 26ರಂದು ನಡೆಸಲು ನಿರ್ಧರಿಸಿದ್ದ ಮೇಲ್ಮನೆಗೆ ಚುನಾವಣೆ ರದ್ದಾಗಿದೆ.

ಬಿಜೆಪಿಯಿಂದ ಮಾಜಿ ರಾಜ್ಯಪಾಲ ರಾಮ್ ಜೋಯಿಸ್ ಹಾಗೂ ಪ್ರಭಾಕರ್ ಕೋರೆ, ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಮಾಜಿ ಸಚಿವ ಅನಿಲ್ ಲಾಡ್ ರಾಜ್ಯಸಭೆಗೆ ಆಯ್ಕೆಗೊಂಡಿದ್ದರೆ, ಕಾಂಗ್ರೆಸ್‌ನ ಎಂ.ವಿ. ರಾಜಶೇಖರನ್, ಬಿಜೆಪಿಯ ವಿ.ಎಸ್. ಆಚಾರ್ಯ, ಭಾರತಿ ಶೆಟ್ಟಿ, ಶಂಕರಪ್ಪ ಹಾಗೂ ಸಿದ್ದರಾಜು, ಜೆಡಿಎಸ್‌ನಿಂದ ಎಂ.ಸಿ. ನಾಣಯ್ಯ, ನಾರಾಯಣ ಸ್ವಾಮಿ ವಿಧಾನಪರಿಷತ್‌ಗೆ ಆಯ್ಕೆಗೊಂಡವರಾಗಿದ್ದಾರೆ.

ನಾಮಪತ್ರ ವಾಪಾಸ್ಸು ಪಡೆಯಲು ಗುರುವಾರ ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.
ಮತ್ತಷ್ಟು
ರಸಗೊಬ್ಬರ ಕೊರತೆ, ವಿಪಕ್ಷಗಳ ಕುತಂತ್ರ: ರಾಮುಲು
ತೈಲ ಬೆಲೆ ಇಳಿಕೆಗೆ ಮಿಶ್ರ ಪ್ರತಿಕ್ರಿಯೆ
ಅವಹೇಳನಕಾರಿ ಮಾತನಾಡಿಲ್ಲ: ದೇವೇಗೌಡ
ತೈಲ ದರ ಕಡಿತ: ಸಚಿವ ಸಂಪುಟದ ನಿರ್ಧಾರ
ರೈತ ಆತ್ಮಹತ್ಯೆಗೆ ಸರಕಾರ ಹೊಣೆ: ಕಾಂಗ್ರೆಸ್ ಆರೋಪ
ಶಂಕಿತ ಉಗ್ರರ ನ್ಯಾಯಾಂಗ ಬಂಧನ ವಿಸ್ತರಣೆ