ಚಿಕುನ್‌ಗುನ್ಯಾ ಹಾವಳಿಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ರೋಗಿಗಳಿಗೆ ಸೂಕ್ತ ಔಷಧಿ ಲಭ್ಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಆರೋಗ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಾರ್ವಜನಿಕರು ರೋಗಿಗಳಿಗೆ ಸೂಕ್ತ ಔಷಧಿ ನೀಡುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಭೀಕರವಾಗಿ ಹಬ್ಬಿರುವ ಚಿಕೂನ್‌ಗುನ್ಯಾ ಕಾಯಿಲೆಗಾಗಿ ಆರೋಗ್ಯ ಇಲಾಖೆಯು ಕೆಎಂಸಿ ಸಹಭಾಗಿತ್ವದಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಔಷಧಿಗಳ ಅವಧಿ ಮೀರಿದ್ದಾಗಿದೆ. ಇಂತಹ ಔಷಧಿ ಸ್ವೀಕರಿಸಿದ ರೋಗಿಗಳು ಗುಣಮುಖರಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಲ್ಲದೆ, ರೋಗಿಗಳಿಗೆ ಅಗತ್ಯವಿರುವ ಹೊಮಿಯೋಪತಿ ಔಷಧಿಯನ್ನು ಪೂರೈಸದೆ, ಅಲೋಪತಿ ಔಷಧಿಯನ್ನು ನೀಡುತ್ತಿದ್ದಾರೆ. ಇದರಿಂದ ಕಾಯಿಲೆ ವಾಸಿಯಾಗಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಾಗಿ ಇಂತಹ ಔಷಧಿ ಸಾರ್ವಜನಿಕರಿಗೆ ಪೂರೈಕೆ ಮಾಡುತ್ತಿದ್ದು, ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
|