ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರದ ಕೊರತೆ: ಮತ್ತಿಬ್ಬರ ಆತ್ಮಹತ್ಯೆ  Search similar articles
ರಸಗೊಬ್ಬರ ಅಬ್ಬರ ತಾರಕ್ಕಕ್ಕೇರಿದ್ದು, ರಸಗೊಬ್ಬರ ದೊರೆಯದೆ ಮತ್ತೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಸಗೊಬ್ಬರ ಸಿಗಲಿಲ್ಲವೆಂದು ನಿರಾಶೆಗೊಂಡ ಹೊನ್ನಾಳಿಯ ರೈತನೊರ್ವ ಆತ್ಮಹತ್ಯೆ ಪ್ರಯತ್ನ ನಡೆಸಿದ್ದು, ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತ ಜಮೀನಿಗೆ ಬೇಕಾದ ರಸಗೊಬ್ಬರಕ್ಕಾಗಿ ಕಳೆದ ಕೆಲವು ದಿನಗಳಿಂದ ಅಲೆದಾಟ ಪ್ರಾರಂಭಿಸಿದ್ದ. ಆದರೆ ಬಿತ್ತನೆ ಬೀಜ ಆರಂಭಿಸಿದ್ದರೂ, ರಸಗೊಬ್ಬರ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ನಿರಾಶೆಗೊಂಡ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ

ಈ ಮಧ್ಯೆ ರಸಗೊಬ್ಬರ ಸಿಗದೆ ಮೀರಶೆಟ್ಟಿ ಕನ್ನಾ ಎಂದ ರೈತ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಕಳೆದ ವರ್ಷವೇ ಬಿತ್ತನೆ ಬೀಜಕ್ಕಾಗಿ ಸಾಲ ಮಾಡಿಕೊಂಡಿದ್ದ. ಅಲ್ಲದೆ, ರಸಗೊಬ್ಬರವೂ ಸೂಕ್ತ ಪ್ರಮಾಣದಲ್ಲಿ ದೊರೆಯದೆ ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಕೃಷಿ ಬಡ್ಡಿದರದಲ್ಲಿ ಕಡಿತ: ಸರ್ಕಾರ ಚಿಂತನೆ
ಹೈಕಮಾಂಡ್ ತೀರ್ಮಾನವೇ ಅಂತಿಮ: ಖರ್ಗೆ
ಚಿಕುನ್‌ಗುನ್ಯಾ ಔಷಧಿ ಅಲಭ್ಯ: ಪ್ರತಿಭಟನೆ
ಸಿಎಂರಿಂದ ಗೋಲಿಬಾರ್ ಗಾಯಳು ಭೇಟಿ
ಮೇಲ್ಮನೆ: ಎಲ್ಲ ಅಭ್ಯರ್ಥಿಗಳ ಅವಿರೋಧ ಆಯ್ಕೆ
ರಸಗೊಬ್ಬರ ಕೊರತೆ, ವಿಪಕ್ಷಗಳ ಕುತಂತ್ರ: ರಾಮುಲು