ರಾಜ್ಯದೆಲ್ಲೆಡೆ ನಡೆಯುತ್ತಿರುವ ರಸಗೊಬ್ಬರ ಗಲಾಟೆಯಲ್ಲಿ ರೈತರು ಭಾಗವಹಿಸಿಲ್ಲ ಎಂದು ಎಂದು ಡಾ. ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸಗೊಬ್ಬರದ ಪ್ರತಿಭಟನೆಯ ಹಿಂದೆ ಸಮಾಜ ಘಾತುಕಗಳ ಕೈವಾಡವಿರುವುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಗುಪ್ತಚರ ಇಲಾಖೆಯನ್ನು ಮತ್ತಷ್ಟು ಬಲ ಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರಸಗೊಬ್ಬರ ಅಭಾವ ಕಂಡು ಬಂದಿಲ್ಲ. ಎಲ್ಲ ಕಡೆಗಳಿಗೂ ಸಮರ್ಪಕ ರೀತಿಯಲ್ಲಿ ಗೊಬ್ಬರವನ್ನು ಹಂಚಲಾಗುತ್ತಿದೆ. ವಿನಾ ಕಾರಣ ಸಮಸ್ಯೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ನಕ್ಸಲ್ ನಿಗ್ರಹದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಹರಡಿರುವ ನಕ್ಸಲರ ನಿಗ್ರಹಕ್ಕೆ ವಿಶೇಷ ದಳ ಸ್ಥಾಪಿಸುವ ಕುರಿತು ಸಭೆ ನಡೆಸಲಾಗುವುದು ಎಂದು ತಿಳಿಸಿದರು.
|