ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯಮಿಯೋರ್ವನನ್ನು ವಂಚಿಸಿ 16.5 ಲಕ್ಷ ದರೋಡೆ  Search similar articles
ಉದ್ಯಮಿಯೋರ್ವನನ್ನು ವಂಚಿಸಿ ದರೋಡೆಕೋರರು ಸುಮಾರು 16.5 ಲಕ್ಷ ರೂ. ನಗದು ಹಣವನ್ನು ಹಾಡುಹಗಲೇ ದೋಚಿಕೊಂಡು ಪರಾರಿಯಾದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ನಗರದ ಆರ್.ಟಿ. ನಗರದಲ್ಲಿ ಉದ್ಯಮಿ ನಾಗೇಶ್ವರ್ ರಾವ್ ಎಂಬುವವರನ್ನು ವಂಚಿಸಿ ಹಣ ಲೂಟಿ ಮಾಡಿದ್ದಾರೆ. ಪ್ರಕರಣವನ್ನು ಆರ್.ಟಿ. ನಗರದ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಇಂದು ಮದ್ಯಾಹ್ನದ ಸುಮಾರಿಗೆ ಬ್ಯಾಂಕ್‌ನಿಂದ ಹಣ ಪಡೆದು ನಾಗೇಶ್ವರ್ ರಾವ್ ಕಾರಿನಲ್ಲಿ ಹೋಗುತ್ತಿರುವಾಗ ಬೈಕ್‌ನಲ್ಲಿ ಬಂದ ಯುವಕರಿಬ್ಬರು ಕಾರ್ ಪಂಕ್ಚರ್ ಆಗಿದೆ ಎಂದರು. ಕಾರಿನಿಂದಿಳಿದು ನೋಡುತ್ತಿದ್ದಂತೆ, ಯುವಕರಿಬ್ಬರು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

9 ದರೋಡೆಕೋರರ ಬಂಧನ
ಈ ನಡುವೆ, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಮಾರು 9 ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಜೆಪಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2 ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು
ನೀರಾವರಿ ಯೋಜನೆಗೆ ಕಾಯಕಲ್ಪ: ಬೊಮ್ಮಾಯಿ
ರಸಗೊಬ್ಬರ ವಿವಾದ - ರೈತರ ಪಾತ್ರವಿಲ್ಲ: ಆಚಾರ್ಯ
ರಾಜ್ಯದ ಅಭಿವೃದ್ದಿಗೆ ಮೊದಲ ಆದ್ಯತೆ: ಯಡಿಯೂರಪ್ಪ
ರಸಗೊಬ್ಬರದ ಕೊರತೆ: ಮತ್ತಿಬ್ಬರ ಆತ್ಮಹತ್ಯೆ
ಕೃಷಿ ಬಡ್ಡಿದರದಲ್ಲಿ ಕಡಿತ: ಸರ್ಕಾರ ಚಿಂತನೆ
ಹೈಕಮಾಂಡ್ ತೀರ್ಮಾನವೇ ಅಂತಿಮ: ಖರ್ಗೆ