ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಎಫ್‌ಡಿಎ ಪರೀಕ್ಷೆಯಲ್ಲಿ ಪಾಸು ಮಾಡಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವಾರು ಜನರಿಗೆ ವಂಚಿಸಿದ ಪ್ರೌಢಶಾಲೆಯ ಶಿಕ್ಷಕ ಸಿ. ಶಿವಕುಮಾರಯ್ಯನನ್ನು ಬಂಧಿಸಿದ್ದಾರೆ.
ನಾಗರಭಾವಿ ಕಲ್ಯಾಣ ನಗರದ ನಿವಾಸಿಯಾದ ಶಿವಕುಮಾರ್‌ನನ್ನು ಬಂಧಿಸಿರುವ ಪೊಲೀಸರು, ಈತನಿಂದ ಕಾರು, ಲ್ಯಾಪ್‌ಟಾಪ್, ಮೊಬೈಲ್ ಫೋನ್ ಹಾಗೂ 10 ಸಾವಿರ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಪ್ರಶ್ನೋತ್ತರ ಪತ್ರಿಕೆಗಳು ಸೇರಿದಂತೆ ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಕೆಪಿಎಸ್‌ಸಿ ಪರೀಕ್ಷೆಗಳ ನೂರಾರು ವಿದ್ಯಾರ್ಥಿಗಳಿಂದ ಹಣ ತೆಗೆದು ವಂಚಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆಗೆ ಮೊದಲು 1 ಲಕ್ಷ ರೂ. ಹಾಗೂ ಪರೀಕ್ಷೆ ಬಳಿಕ 1 ಲಕ್ಷ ರೂ. ಕೊಡಬೇಕೆಂದು ಆಕಾಂಕ್ಷಿಗಳಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.
|