ಕಸಾಯಿಖಾನೆ ಕಾಮಗಾರಿ ವಿರೋಧಿಸಿದ ಆನೇಕಲ್ ಶಾಸಕ ನಾರಾಯಣ ಸ್ವಾಮಿ ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದ್ದಾರೆ.
ಶುಕ್ರವಾರ ಹೊಸೂರು ರಸ್ತೆ ಚಂದಾಪುರ ಸಮೀಪದ ಇಗ್ಗಲೂರಿನಲ್ಲಿ ಬಿಬಿಎಂಪಿ ಹೊಸದಾಗಿ ಸ್ಥಾಪಿಸಲು ಯೋಜಿಸಿರುವ ಕಸಾಯಿಖಾನೆಗೆ ಹಿಂದಿನಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಪ್ರದೇಶದ ಕಾಸಾಯಿಖಾನೆ ನಿರ್ಮಿಸುವುದರಿಂದ ಪರಿಸರ ನಾಶವಾಗುತ್ತದೆ. ಆದ್ದರಿಂದ ನಗರದ ಹೊರಗಡೆ ನಿರ್ಮಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ನಡೆದ ಪ್ರತಿಭಟನೆ ವೇಳೆ ಭಾಗವಹಿಸಿದ್ದ ಶಾಸಕ ನಾರಾಯಣ ಸ್ವಾಮಿ ಹಾಗೂ ಸುಮಾರು 50 ಕಾರ್ಯಕರ್ತರನ್ನು ಬಂಧಿಸಿದ್ದರು. ಈ ಸಂದರ್ಭದಲ್ಲಿ ಹೆಬ್ಬಗೂಡು ಪೊಲೀಸ್ ಠಾಣೆ ಎದುರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಧರಣಿ ನಡೆಸಿ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ಬಳಿಕ ಪೊಲೀಸರು ಬಂಧಿತರನ್ನು ಬಿಡುಗಡೆಗೊಳಿಸಿದರು.
|