ಸೇನಾ ಗುಪ್ತಚರ ದಳ ಹಾಗೂ ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಬಂಧಿತರನ್ನು ಲೈಕುರಾಮ್ ಜಿತೇನ್ ಸಿಂಗ್ ಆಲಿಯಾಸ್ ದಾದಾ, ತುಂಗೋ ಸಿಂಗ್, ಜಾನಿ, ಮೇಘನ್ ಚಂದರ್, ಬಿಕಾಶ್ ಪ್ರಧಾನ್ ಹಾಗೂ ಅಮರ್ ಎಂದು ಗುರುತಿಸಲಾಗಿದೆ. ಇವರು ಮಹದೇವಪುರ ಬಳಿಯ ಚಿನ್ಮಯ ಮಿಷನ್ ರಸ್ತೆಯ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಬಂಧಿತ ಉಗ್ರರಿಂದ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ಕೆಲವು ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಲಾಗಿದೆ. ಮಣಿಪುರದ ಈ ಉಗ್ರರು ಉಲ್ಪಾದ ಗುಂಪಿನ ಜೊತೆ ಸಂಪರ್ಕ ಹೊಂದಿದ್ದರು. ಅಲ್ಲದೆ, ಬಂಧಿತರಲ್ಲಿ ಅಮರ್ ಅನ್ನುವವನಿಗೆ ಅಲ್ ಖೈದಾ ಸಂಪರ್ಕವಿದ್ದರೆ, ದಾದಾನಿಗೆ ಐಎಸ್ಐ ಸಂಪರ್ಕ ಹೊಂದಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ಬಂಧಿತ ಉಗ್ರರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
|