ಮಂಗಳೂರು: ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಸಾವು ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿರುವ ಅತುಲ್ ರಾವ್ ಅವರನ್ನು ಮತ್ತೆ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಎದೆನೋವಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಂದ ಬಿಡುಗಡೆಗೊಂಡ ಬಳಿಕ ಡಿಸ್ಚಾರ್ಜ್ ಮಾಡಿ ಪೊಲೀಸರು ನಿಗೂಢ ಸ್ಥಳವೊಂದಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಪದ್ಮಪ್ರಿಯಾ ಸಾವಿನ ಪ್ರಕರಣದ ಕುರಿತು ಬೆಂಗಳೂರಿನಿಂದ ನಗರಕ್ಕೆ ಕರೆದುಕೊಂಡು ಬಂದು, ಸುಮಾರು ಎಂಟು ಗಂಟೆಗಳಿಗೂ ಹೆಚ್ಚಿನ ಕಾಲ ತನಿಖೆ ನಡೆಸಲಾಗಿದ್ದು, ಬಳಿಕ ಅತುಲ್‌ರನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.
ಆದರೆ, ಈಗ ಮತ್ತೆ ಆತನನ್ನು ರಹಸ್ಯ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿರುವ ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ. ಈ ನಡುವೆ ಪದ್ಮಪ್ರಿಯಾ ಕೊಲೆ ಪ್ರಕರಣಕ್ಕೆ ಅತುಲ್ ರಾವ್ ಪ್ರಮುಖ ಆರೋಪಿ ಎಂದು ಶಾಸಕ ರಘುಪತಿ ಭಟ್ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.
|