ಬಿಜೆಪಿಯ ಸಿದ್ಧಾಂತಕ್ಕೂ ನನ್ನ ಸಿದ್ಧಾಂತಕ್ಕೂ ಸರಿ ಹೊಂದುತ್ತಿಲ್ಲ. ಅಷ್ಟಕ್ಕೂ ಅವರು ಯಾರೂ ಬಂದು ನನ್ನನ್ನು ಭೆಟಿಯಾಗಿಲ್ಲ ಎನ್ನುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ತಾವು ಬಿಜೆಪಿ ಸೇರುವುದಾಗಿ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿನಲ್ಲಿಯೇ ಇದ್ದೇನೆ. ಸೋಮವಾರದವರೆಗೆ ಬೆಂಗಳೂರಿಗೆ ಹೋಗುವುದಿಲ್ಲ. ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವುದರಿಂದ ಸೊಮವಾರ ಬೆಂಗಳೂರಿಗೆ ಹೋಗುತ್ತೇನೆ. ನಾನು ಬಿಜೆಪಿ ಸೇರಲಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹೈಕಮಾಂಡ್ ನನಗೆ ಕೊಡಲು ನಿರ್ಧರಿಸಿರಬಹುದು. ಆದರೆ ಇದನ್ನು ತಪ್ಪಿಸಲು ಕೆಲವರು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡದೆ ಸ್ವಂತ ಶಕ್ತಿ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆನ್ನುವುದು ನನ್ನ ಆಸೆ ಎಂದರು.
|