ನಗರದ ಫ್ಯಾಶನ್ ಟೆಕ್ನಾಲಜಿ ಸಂಸ್ಥೆ (ಮಿಫ್ಟ್) ದೇಶದಲ್ಲಿಯೇ ಮೊದಲ ಬಾರಿಗೆ ಬಿ.ಎ ಪದವಿ ಕೋರ್ಸ್‌ನಲ್ಲಿ ಭದ್ರತೆ ಹಾಗೂ ಪತ್ತೆದಾರಿ ವಿಜ್ಞಾನ ವಿಷಯಗಳನ್ನು ಸೇರಿಸಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೇ ಆರಂಭವಾಗಿರುವ ಈ ಕೋರ್ಸ್ ಮಂಗಳೂರು ವಿಶ್ವವಿದ್ಯಾಲಯದಿಂದ ಅಂಗೀಕೃತವಾಗಿದ್ದು, ಇದು ಪತ್ತೆದಾರಿಕೆಗೆ ಶೈಕ್ಷಣಿಕ ಹಿನ್ನೆಲೆಯನ್ನು ಒದಗಿಸುತ್ತದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಎಂ.ಜಿ.ಹೆಗ್ಡೆ ತಿಳಿಸಿದರು.
ಭದ್ರತಾ ನಿರ್ವಹಣೆ ತೀರಾ ವೃತ್ತಿಪರ ಕ್ಷೇತ್ರವಾಗಿದ್ದು, ಇದಕ್ಕೆ ಹೆಚ್ಚಿನ ಮಹತ್ವ ಇರುವ ಈ ಹಿನ್ನೆಲೆಯಲ್ಲಿ ಈ ಕೋರ್ಸನ್ನು ಆರಂಭಿಸಲಾಗಿದೆ. ಇಲ್ಲಿ ಮನಶಾಸ್ತ್ರ ಶರೀರ ಶಾಸ್ತ್ರ, ಭೂಗೋಳ, ಕಾನೂನು, ಭದ್ರತೆ ಹಾಗೂ ನಿರ್ವಹಣೆ, ಪತ್ತೆದಾರಿ ವಿಷಯಗಳನ್ನು ಪಠ್ಯಕ್ರಮ ಒಳಗೊಂಡಿದೆ. ಇಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಕಡ್ಡಾಯ ವಿಷಯವಾಗಿದ್ದು ಕನ್ನಡ ಐಚ್ಛಿಕ ವಿಷಯವಾಗಿರುತ್ತದೆ.
ಪೊಲೀಸ್ ಇಲಾಖೆ ಸೇರಬಯಸುವವರಿಗೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಈ ಕೋರ್ಸ್ ಸಹಾಯವಾಗಲಿದೆ. ಭದ್ರತೆ ಹಾಗೂ ಪತ್ತೆದಾರಿ ವಿಜ್ಞಾನ ಅಧ್ಯಯನ ನಡೆಸಿದವರಿಗೆ ಇಂಡಸ್ಟ್ರಿ ಇಂಟರ್‌ನ್ಯಾಷನಲ್ ಹೋಟೆಲ್ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭಿಸುವ ಅವಕಾಶಗಳಿವೆ ಎಂದು ಹೆಗ್ಡೆ ಹೇಳಿದ್ದಾರೆ.
|