ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸ್ತೆಗಿಳಿಯಲು ಕಾತರವಾಗಿರುವ 'ಚೀತಾ'ಗಳು  Search similar articles
ಪೊಲೀಸ್ ಇಲಾಖೆ 301 ಚಿರತೆಗಳು ಬಂದಿವೆ. ಶೀಘ್ರವೇ ಅವೆಲ್ಲವೂ ರಸ್ತೆಗಿಳಿಯಲಿವೆ. ಆದರೆ ಸದ್ಯ ಆ ಚಿರತೆಗಳನ್ನು ಕಟ್ಟಿ ಹಾಕಿದ ಪರಿಣಾಮ ಅವೆಲ್ಲವೂ ಧೂಳು ತಿನ್ನುತ್ತಿವೆ. ಆಶ್ಚರ್ಯ ಬೇಡ ಇದು ಪೊಲೀಸ್ ಇಲಾಕೆಗೆ ಬಂದ 'ಚೀತಾ' ಬೈಕ್‌ಗಳು.

ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಅಪರಾಧ ಪ್ರದೇಶಗಳಿಗೆ ಥಟ್ಟನೆ ಧಾವಿಸಲು ಸುಲಭವಾಗುವಂತೆ ಪೊಲೀಸರಿಗೆ ಈ ಬೈಕ್ ನೀಡಲಾಗಿದೆ. ದಕ್ಷಿಣ ವಿಭಾಗಕ್ಕೆ ನೀಡಲಾದ 51 ಬೈಕ್‌ಗಳು ಸದ್ಯ ಶಂಕರಪುರ ಠಾಣೆಯಲ್ಲಿ ಧೂಳು ತಿನ್ನಿತ್ತಿವೆ. ಕಾರಣ ಇಷ್ಟೇ, ಈ ಬೈಕ್‌ಗಳಿಗೆಲ್ಲ ಇನ್ನೂ ಇನ್ಸೂರೆನ್ಸ್ ಹಾಗೂ ಆರ್ಟಿಒ ತಪಾಸಣೆ ಆಗಿಲ್ಲ.

ಬೈಕ್ ಬಂದು ಸುಮಾರು 10 ದಿನಗಳು ಕಳೆದಿವೆ. ಆದರೆ ಈ ವರೆಗೂ ಇದಕ್ಕೆ ರಸ್ತೆಗಿಳಿಯುವ ಭಾಗ್ಯ ಬಂದಿಲ್ಲ. ಈ ವಾರ ತಪಾಸಣೆ ಹಾಗೂ ಇನ್ಸೂರೆನ್ಸ್ ಆಗಬಹುದೆನ್ನುವುದು ವಿಶ್ವಾಸವನ್ನು ಇಲ್ಲಿನ ಸಿಬ್ಬಂದಿಗಳು ವ್ಯಕ್ತಪಡಿಸಿದ್ದಾರೆ. ಪೊಲೀಸ್ ಬೈಕ್‌ಗಳಿಗೆ ಬೇಕಾದ ಅಗತ್ಯ ಗಾರ್ಡ್, ಸೈರನ್, ಲೈಟ್ ಕೂಡಾ ಈ ಬೈಕ್‌ಗಳಿಗೆ ಇನ್ನಷ್ಟೇ ಅಳವಡಿಸಬೇಕಾಗಿದೆ. ಈಗಾಗಲೇ ಮಳೆಹನಿ, ಗಾಳಿ ಹಾಗೂ ಧೂಳು ಒಟ್ಟಿಗೆ ಸೇರಿದ ಪರಿಣಾಮ ಬೈಕ್‌ಗಳಿಗೆ ಅಲ್ಲಲ್ಲಿ ಸ್ವಲ್ಪ ತುಕ್ಕು ಹಿಡಿದಿದೆ.

ಒಂದೊಂದು ಠಾಣೆಗೆ ಇಂತಿಷ್ಟು ಬೈಕ್ ಎಂದು ಕಮೀಷನರ್ ಹಂಚಿದ ಬಳಿಕೆ ಈ ಬೈಕ್‌ಗಳನ್ನು ಯಾವ ಸಿಬ್ಬಂದಿಗಳಿಗೆ ನೀಡಬೇಕೆನ್ನುವುದನ್ನು ನಿರ್ಧರಿಸಲಾಗುತ್ತದೆ.
ಮತ್ತಷ್ಟು
ಮಂಗಳೂರು: ಮಿಫ್ಟ್‌ನಿಂದ ಪತ್ತೆದಾರಿ ಕೋರ್ಸ್
ಬಿಜೆಪಿ ಸೇರ್ಪಡೆ ಊಹಾಪೋಹಕ್ಕೆ ಸಿದ್ದು ತೆರೆ
ರಸಗೊಬ್ಬರ ಒತ್ತಾಯಕ್ಕೆ ಶೀಘ್ರವೆ ನಿಯೋಗ: ಸಿಎಂ
ಪೊಲೀಸರಿಂದ ಮತ್ತೆ ಅತುಲ್ ವಿಚಾರಣೆ
ಮುಂದುವರಿದ ಗೊಬ್ಬರ ಹಾಹಾಕಾರ
ಸಭಾಪತಿ, ಉಪಸಭಾಪತಿ ಸ್ಥಾನ: ಮೈತ್ರಿ ಮುಂದರಿಕೆ