ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಂಟಿ ಸದನ ಸಮಿತಿಗೆ ಖರ್ಗೆ ಆಗ್ರಹ  Search similar articles
ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಯ ಹಿಂದಿನ ಸತ್ಯಾಂಶ ತಿಳಿಯಲು ಜಂಟಿ ಸದನ ಸಮಿತಿಯನ್ನು ರಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಶಿಕಾರಿಪುರದಲ್ಲಿ ರಸಗೊಬ್ಬರಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರೈತನ ಆತ್ಮಹತ್ಯೆ ಪ್ರಕರಣದ ಕುರಿತು ಮುಖ್ಯಮಂತ್ರಿಗಳು ಲಘುವಾಗಿ ಮಾತನಾಡುವುದನ್ನು ಬಿಟ್ಟು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರ ಅಂಕಿ ಅಂಶಗಳ ಮೂಲಕ ತಾನು ಪೂರೈಸಿದ ಗೊಬ್ಬರದ ಲೆಕ್ಕ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಿಲ್ಲ. ಈ ಬಗ್ಗೆ ಸದನದಲ್ಲಿ ಸರ್ಕಾರ ಸ್ಪಷ್ಟೀಕರಣ ನೀಡಬೇಕೆಂದು ಅವರು ತಿಳಿಸಿದರು.

ಬೆಂಗಳೂರು ವರದಿ:
ಈ ಮಧ್ಯೆ ಸೋಮವಾರ ನಡೆಯಲಿರುವ ಅಧಿವೇಶನಕ್ಕೂ ಮೊದಲು ಕಾಂಗ್ರೆಸ್ ನಡೆಸಿದ ಶಾಸಕಾಂಗ ಸಭೆ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ರೈತರ ಮೇಲಿನ ಗೋಲಿಬಾರ್ ಪ್ರಕರಣ ಹಾಗೂ ಸಮರ್ಪಕವಾಗಿ ಗೊಬ್ಬರ ವಿತರಣೆಯಾಗದಿರುವ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಮತ್ತಷ್ಟು
ಬಜೆಟ್‌ನಲ್ಲಿ ತೆರಿಗೆ ಹೊರೆ ಇಲ್ಲ: ಯಡಿಯೂರಪ್ಪ
ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭ
ರಸ್ತೆಗಿಳಿಯಲು ಕಾತರವಾಗಿರುವ 'ಚೀತಾ'ಗಳು
ಮಂಗಳೂರು: ಮಿಫ್ಟ್‌ನಿಂದ ಪತ್ತೆದಾರಿ ಕೋರ್ಸ್
ಬಿಜೆಪಿ ಸೇರ್ಪಡೆ ಊಹಾಪೋಹಕ್ಕೆ ಸಿದ್ದು ತೆರೆ
ರಸಗೊಬ್ಬರ ಒತ್ತಾಯಕ್ಕೆ ಶೀಘ್ರವೆ ನಿಯೋಗ: ಸಿಎಂ