ಸಿಖ್ ಸಮುದಾಯದ ವಿವಾದಾತ್ಮಕ ಗುರು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್‌ರನ್ನು ಪೊಲೀಸರು ಅಜ್ಞಾತವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.
ದೇಶಾದ್ಯಂತ ಸಿಖ್ ಪ್ರತಿಭಟನೆಗೆ ಕಾರಣವಾದ ರಾಮ್ ರಹೀಮ್ ಸಿಂಗ್ ಅವರು ನಿನ್ನೆ ತಡರಾತ್ರಿಯವರೆಗೂ ಮೈಸೂರಿನ ಸಿದ್ದಲಿಂಗಪುರದ ಸ್ಥಳೀಯ ಶಾಖೆಯಲ್ಲಿ ವಾಸವಾಗಿದ್ದರು. ಆ ಬಳಿಕ ಪೊಲೀಸರು ದೆಹಲಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದಲ್ಲಿ ವಾಸವಾಗಿದ್ದಾಗ ಶಾಖೆಯಲ್ಲಿ ರಾಮ್ ರಹೀಮ್ ಸಿಂಗ್ ಅವರು ಇದ್ದಾಗ ನೀಡಲಾಗಿದ್ದ ಬಿಗಿ ಬಂದೋಬಸ್ತ್ ಈಗ ಕಂಡು ಬರುತ್ತಿಲ್ಲ. ಅಲ್ಲದೆ, ಅವರು ತಂಗಿದ್ದ ಶಾಖೆಗೆ ಸಾಮಾನ್ಯ ಜನರಿಗೂ ಪ್ರವೇಶ ಕಲ್ಪಸಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಆದರೆ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಗುಪ್ತಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಇನ್ನೊಂದು ಮೂಲ ಹೇಳಿದೆ. ರಾಮ್ ರಹೀಮ್ ಮುಂಬೈಗೆ ಆಗಮಿಸಿದಾಗ ಅವರ ಅಂಗರಕ್ಷನೊಬ್ಬ ಹಾರಿಸಿದ ಗುಂಡಿಗೆ ಸಿಖ್ ಯುವಕನೊಬ್ಬ ಬಲಿಯಾದ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
|